ಇಬ್ಬರು ಆರೋಪಿಗಳಾದ ದಿನೇಶ್ ಯಾದವ್ ಮತ್ತು ಅಮಿತ್ ಯಾದವ್ ರೂಪದರ್ಶಿಯನ್ನು ಕಾಲ್‌ಗರ್ಲ್ ಎಂದು ತಿಳಿದು ವರ್ತಿಸಿದಾಗ ಕೋಪಗೊಂಡ ರೂಪದರ್ಶಿ, ಜೋರಾಗಿ ಕೂಗಿ ಜನರನ್ನು ಸೇರಿಸಿದ್ದಾಳೆ. ಜನ ಸೇರುತ್ತಿರುವುದು ಕಂಡು ಆರೋಪಿಗಳು ಅಟೋದಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೆ, ಅಟೋವನ್ನು ಬೆನ್ನಟ್ಟಿದ ರೂಪದರ್ಶಿ ಒಬ್ಬ ಆರೋಪಿಯನ್ನು ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ಜಾಗಿಂಗ್ ಮಾಡಿ ಹೊರಬಂದ ನಂತರ ಇಬ್ಬರು ಆರೋಪಿಗಳು ಹತ್ತಿರ ಬಂದು ಒಂದು ರಾತ್ರಿಗೆ ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾರೆ. ಆರೋಪಿಗಳ ವರ್ತನೆಯಿಂದ ಆಕ್ರೋಶಗೊಂಡ ರೂಪದರ್ಶಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾಳೆ. ಆದರೆ, ನೀನು ಪೊಲೀಸರಿಗೆ ಬೇಕಾದರೆ ದೂರು ಕೊಡು ನಾವು ಹೆದರುವುದಿಲ್ಲ ಎಂದು ಗದರಿದ್ದಾರೆ.
ಜನರು ಸೇರುತ್ತಿರುವುದು ಕಂಡು ಗಾಬರಿಯಾದ ಇಬ್ಬರು ಆರೋಪಿಗಳು ಅಟೋ ಹತ್ತಿ ಪರಾರಿಯಾಗುವ ಪ್ರಯತ್ನ ಮಾಡಿದ್ದಾರೆ. ಆದರೆ, ನಾನು ಧೈರ್ಯ ತಂದುಕೊಂಡು ಅಟೋವನ್ನು ಬೆನ್ನಟ್ಟಿ ನಾಕಾಬಂದಿಯಲ್ಲಿದ್ದ ಪೊಲೀಸರಿಗೆ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ನಂತರ ಪೊಲೀಸ್ ಅಧಿಕಾರಿ ತಮ್ಮ ಪೊಲೀಸ್ ಪಡೆಯೊಂದಿಗೆ ಬೆನ್ನಟ್ಟಿ ಇಬ್ಬರು ಆರೋಪಿಗಳನ್ನು ಬಂಧಿಸಿದರು ಎಂದು ಮಾಡೆಲ್ ತಿಳಿಸಿದ್ದಾಳೆ.