ಸಹಾಯ ಕೋರಿ ಬಂದ ಯುವತಿಗೆ ಏನ್ ಮಾಡ್ದ ಗೊತ್ತಾ?

ಸೋಮವಾರ, 11 ಡಿಸೆಂಬರ್ 2023 (14:37 IST)
ಸಹಾಯ ಕೇಳಿ ಬಂದ ಹದಿಹರೆಯದ ಯುವತಿಯನ್ನು ಒತ್ತಾಯಪೂರ್ವಕವಾಗಿ ಬಂಧನದಲ್ಲಿಟ್ಟು 15 ದಿನಗಳ ಕಾಲ ನಿರಂತರ ಅತ್ಯಾಚಾರವೆಸಗಿದ ದಾರುಣ ಘಟನೆ ಹರಿಯಾಣಾದಿಂದ ವರದಿಯಾಗಿದೆ.
 
ಜಾತಿ ಪ್ರಮಾಣಪತ್ರ ಪಡೆಯುವುದಕ್ಕೆ ಸಹಾಯ ಕೋರಿ ವಕೀಲರೊಬ್ಬರ ಬಳಿ ತೆರಳಿದ್ದ ಅಪ್ರಾಪ್ತ ವಯಸ್ಕ ಯುವತಿ ಮೇಲೆ ವಕೀಲ ಎರಡು ವಾರಗಳ ಕಾಲ ವಕೀಲ ರೇಪ್ ಮಾಡಿದ ಪೈಶಾಚಿಕ ಕೃತ್ಯ ವರದಿಯಾಗಿದೆ. 
 
ಹರಿಯಾಣಾದ ಪಾನಿಪತ್‌ನಲ್ಲಿ ತನ್ನ ಮನೆಗೆ ಕೇವಲ 50 ಅಡಿ ದೂರದಲ್ಲಿದ್ದ ವಕೀಲಎಂಬವರ ಮನೆಗೆ ಯುವತಿ ಹೋಗಿದ್ದಳು. 40ರ ಆಸುಪಾಸಿನಲ್ಲಿರುವ ವಕೀಲ ಅವಳನ್ನು ಕೂಡಲೇ ಸೆರೆಯಲ್ಲಿಟ್ಟು ಸುಮಾರು 14 ದಿನಗಳ ಕಾಲ ಅವಳ ಮೇಲೆ ಮತ್ತೆ ಮತ್ತೆ ರೇಪ್ ಮಾಡಿದ.
 
ಬೆಳಿಗ್ಗೆ ಮನೆಯಿಂದ ಸಹಾಯ ಮಾಡುವಂತೆ ಯುವತಿ ಕಿರುಚಿಕೊಂಡ ಸದ್ದು ಕೇಳಿ ಪೊಲೀಸರಿಗೆ ಕರೆ ಮಾಡಿದಾಗ ಪೊಲೀಸರು ಅಲ್ಲಿಗೆ ಧಾವಿಸಿ ಯುವತಿಯನ್ನು ರಕ್ಷಿಸಿದರು.
 
ಆರೋಪಿಯ ಪತ್ನಿ ಮತ್ತು ಪುತ್ರ ಕೂಡ ಅವನ ಕೃತ್ಯಕ್ಕೆ ನೆರವಾಗಿದ್ದರೆಂದು ಯುವತಿ ಆರೋಪಿಸಿದ್ದಾಳೆ. ಯುವತಿಯ ತಂದೆ, ತಾಯಿ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ತಮ್ಮ ಮನೆಯ ಸಮೀಪದಲ್ಲಿ ಬಾಲಕಿಯನ್ನು ಬಂಧಿಯಾಗಿರಿಸಲಾಗಿತ್ತೆಂಬ ವಿಷಯ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ