ನಿರುದ್ಯೋಗಿ ಪತಿಗೆ ಅವಮಾನಿಸಿದ ಪತ್ನಿಗೆ ಆದ ಗತಿಯೇನು ಗೊತ್ತಾ?
ಮಂಗಳವಾರ, 8 ಡಿಸೆಂಬರ್ 2020 (07:14 IST)
ಜೋಧ್ ಪುರ : ಉದ್ಯೋಗವಿಲ್ಲದ ವ್ಯಕ್ತಿಯೊಬ್ಬ ತನ್ನ 30 ವರ್ಷದ ಪತ್ನಿಯನ್ನು ಕೊಲೆ ಮಾಡಿದ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ.
ಕಳೆದ ಕೆಲವು ತಿಂಗಳಿನಿಂದ ವ್ಯಕ್ತಿಗೆ ಕೆಲಸವಿಲ್ಲದ ಕಾರಣ ಮನೆ ಬಾಡಿಗೆಯಿಂದ ಜೀವನ ನಡೆಸುತ್ತಿದ್ದರು. ಈ ವಿಚಾರಕ್ಕೆ ಆಗಾಗ ದಂಪತಿಯ ನಡುವೆ ಜಗಳ ನಡೆಯುತ್ತಿತ್ತು. ಪತ್ನಿ ಪತಿಯ ಬಗ್ಗೆ ಹೀಯಾಳಿಸಿದ ಹಿನ್ನಲೆಯಲ್ಲಿ ಕೋಪಗೊಂಡ ಪತಿ ಕತ್ತರಿಯಿಂದ ಆಕೆಯ ಕತ್ತು ಮತ್ತು ದೇಹಕ್ಕೆ ಇರಿದಿದ್ದಾನೆ. ಇದರ ಪರಿಣಾಮ ಆಕೆ ಸ್ಥಳದಲ್ಲೇ ಸಾವನಪ್ಪಿದ್ದಾಳೆ.
ಈ ಬಗ್ಗೆ ಆತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.