ಹಣಕ್ಕಾಗಿ ಪ್ರೇಮಿಯ ಜೊತೆ ಸೇರಿ ಪತಿಯನ್ನೇ ಕಿಡ್ನ್ಯಾಪ್ ಮಾಡಿಸಿದ ಪತ್ನಿ

ಭಾನುವಾರ, 6 ಡಿಸೆಂಬರ್ 2020 (07:02 IST)
ಬೆಂಗಳೂರು : ಹಣಕ್ಕಾಗಿ  ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 36 ವರ್ಷದ ವ್ಯಕ್ತಿಯನ್ನು ಮೂವರು ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ವ್ಯಕ್ತಿಯನ್ನು ಬಿಡುಗಡೆ ಮಾಡಲು ಆರೋಪಿಗಳು ಹಣದ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಅನುಮಾನಗೊಂಡ ವ್ಯಕ್ತಿಯ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪ್ರೇಮಿಯ ಜೊತೆ ಸೇರಿ ಪತಿಯ ಹಣವನ್ನು ಲೂಟಿ ಮಾಡಲು ಸಂತ್ರಸ್ತ  ವ್ಯಕ್ತಿಯ ಪತ್ನಿ ಈ ತಂತ್ರ ರೂಪಿಸಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ವಿಚಾರಣೆ ನಡೆಸಿ ಇದಕ್ಕೆ ಸಂಬಂಧಪಟ್ಟವರನನ್ಉ ಬಂಧಿಸಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ