ಲೂಡೋ ಆಟದಲ್ಲಿ ನಿರಂತರವಾಗಿ ಸೋಲಿಸಿದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?
ಮಂಗಳವಾರ, 28 ಏಪ್ರಿಲ್ 2020 (09:33 IST)
ಗಾಂಧಿನಗರ : ಆನ್ ಲೈನ್ ಲೂಡೋ ಆಟದಲ್ಲಿ ಪತ್ನಿ ನಿರಂತರವಾಗಿ ಸೋಲಿಸಿದ್ದಕ್ಕೆ ಕೋಪಗೊಂಡ ಪತಿ ಪತ್ನಿಗೆ ಥಳಿಸಿದ ಘಟನೆ ಗುಜರಾತಿನ ವಡೋದರಾದಲ್ಲಿ ನಡೆದಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯಲ್ಲಿದ್ದ ದಂಪತಿ ಸಮಯ ಕಳೆಯಲು ಆನ್ ಲೈನ್ ನಲ್ಲಿ ಲುಡೋ ಆಟ ಆಡಿದ್ದಾರೆ. ಈ ಆಟದಲ್ಲಿ ಪತ್ನಿ ಪತಿಯನ್ನು ನಿರಂತರವಾಗಿ ಸೋಲಿಸಿದ್ದಾಳೆ. ಇದರಿಂದ ಕೋಪಗೊಂಡ ಪತಿ ಪತ್ನಿಯ ಜೊತೆ ಜಗಳವಾಡಿ ಆಕೆಗೆ ಹಿಗ್ಗಾ ಮಗ್ಗಾ ಥಳಿಸಿದ್ದಾನೆ.
ಇದರ ಪರಿಣಾಮ ಪತ್ನಿಯ ಬೆನ್ನು ಹುರಿಗೆ ತೀವ್ರವಾಗಿ ಪೆಟ್ಟಾಗಿದ್ದು, ಆಕೆ ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.