ತನ್ನೊಂದಿಗೆ ಜಗಳ ಮಾಡಿದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?

ಗುರುವಾರ, 12 ನವೆಂಬರ್ 2020 (06:37 IST)
ಅಸ್ಸಾಂ : ಅಸ್ಸಾಂನ ಸಿಲ್ಚಾರ್ನ ನಲ್ಲಿ ವ್ಯಕ್ತಿಯೊಬ್ಬ ತಮ್ಮ ಪತ್ನಿಗೆ ಬೆಂಕಿ ಇಟ್ಟು ಕೊಂದು ಶವವನ್ನು ಸಮಾಧಿ ಮಾಡಿದ ಘಟನೆ ನಡೆದಿದೆ.

ರಂಜನಾ ಬೇಗಂ ಮೃತಪಟ್ಟ ಮಹಿಳೆ. ಈಕೆಯ ಪತಿ ಮದ್ಯ ಸೇವಿಸಿ ಮನೆಗೆ ಬಂದ ಹಿನ್ನಲೆಯಲ್ಲಿ ಪತಿಯೊಂದಿಗೆ ಜಗಳಕ್ಕೀಳಿದಿದ್ದಾಳೆ. ಇದರಿಂದ ಕೋಪಗೊಂಡ ಪತಿ ಆಕೆಗೆ ಬೆಂಕಿ ಹಚ್ಚಿದ್ದಾನೆ.  ಇದರಿಂದ ಮೃತಪಟ್ಟ ಆಕೆಯನ್ನು ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಹೂತು ಹಾಕಿ ನೆರೆಮನೆಯವರ ಬಳಿ ಪತ್ನಿ ಕಾಣೆಯಾಗಿದ್ದಾಳೆಂದು ಕಥೆ ಕಟ್ಟಿದ್ದಾನೆ.

ಆದರೆ ಗ್ರಾಮಸ್ಥರು ಅನುಮಾನಗೊಂಡು ಪತಿಯನ್ನು ಥಳಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ