ಫೇಸ್ಬುಕ್ ನಲ್ಲಿ ಯುವಕರನ್ನು ಪರಿಚಯಮಾಡಿಕೊಂಡ ಯುವತಿ ನಂತರ ಮಾಡುತ್ತಿದ್ದದ್ದೇನು ಗೊತ್ತಾ?
ಮಂಗಳವಾರ, 12 ಫೆಬ್ರವರಿ 2019 (07:10 IST)
ರಾಜಸ್ತಾನ : ಹುಡುಗರ ಜೊತೆ ಸಂಬಂಧ ಬೆಳೆಸಿ ನಂತರ ಅತ್ಯಾಚಾರದ ಕೇಸ್ ಹಾಕುವುದಾಗಿ ಬೆದರಿಸಿ ಅವರ ಬಳಿ ಇದ್ದ ಹಣ ದೋಜುತ್ತಿದ್ದ ಖತರ್ನಾಕ್ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ. ದೆಹಲಿ ಮೂಲದ 28 ವರ್ಷದ ಹುಡುಗಿ ಫೇಸ್ಬುಕ್ ನಲ್ಲಿ ಖಾತೆ ತೆರೆದು ಅದರಲ್ಲಿ ಯುವಕರನ್ನು ಪರಿಚಯ ಮಾಡಿಕೊಂಡು ಬಳಿಕ ಟೀ ಕುಡಿಯೋ ನೆಪದಲ್ಲಿ ಹುಡುಗರನ್ನು ಕರೆಯುತ್ತಿದ್ದಳಂತೆ. ಅಷ್ಟೇ ಅಲ್ಲದೇ ಈ ಚಾಲಾಕಿ ಹುಡುಗಿ ಯುವಕರಿಗೆ ಗರ್ಭ ನಿರೋಧಕ ಮಾತ್ರೆ ತರುವಂತೆ ಹೇಳಿ ಅವರ ಜೊತೆ ಸಂಬಂಧ ಬೆಳೆಸುತ್ತಿದ್ದಳಂತೆ.
ನಂತರ ಅತ್ಯಾಚಾರದ ಕೇಸ್ ಹಾಕುವುದಾಗಿ ಬೆದರಿಸಿ ಹುಡುಗರ ಬಳಿ ಇದ್ದ ಹಣ ದೋಚುತ್ತಿದ್ದಳಂತೆ. ಮರ್ಯಾದೆಗೆ ಹೆದರಿ ಮೋಸ ಹೋದ ಯಾವ ಯುವಕರು ಪೊಲೀಸ್ ಠಾಣೆಗೆ ಈವರೆಗೆ ದೂರು ನೀಡಿರಲಿಲ್ಲ. ಆದರೆ ಇದೀಗ ಆಕೆಯಿಂದ ಮೋಸ ಹೋದ ಯುವಕನೊಬ್ಬ ಆಕೆಯ ವಿರುದ್ಧ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ಯುವತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.