ತಾಯ್ನಾಡಿನ ರಹಸ್ಯ ಬಾಯ್ಬಿಡುವಂತೆ ಯೋಧ ಅಭಿನಂದನ್ ಗೆ ಪಾಕ್ ನೀಡಿದ ಟಾರ್ಚರ್ ಏನು ಗೊತ್ತಾ?

ಮಂಗಳವಾರ, 5 ಮಾರ್ಚ್ 2019 (10:52 IST)
ನವದೆಹಲಿ : ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ತಾಯ್ನಾಡಿನ ಬಗೆಗಿನ ರಹಸ್ಯವನ್ನು ಬಾಯ್ಬಿಡುವಂತೆ ಹೇಳಿ ನೀಡಿದ ಚಿತ್ರಹಿಂಸೆಯನ್ನು ಕೇಳಿದರೆ ನೀವೆ ದಂಗಾಗ್ತೀರಾ.


ಹೌದು. ಪಾಕ್ ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸುವಾಗ  ಪಾಕ್ ವಶವಾದ ಅಭಿನಂದನ್‍ ಗೆ 24 ಗಂಟೆ ನಿದ್ರೆಯೇ ಮಾಡೋಕೆ ಬಿಟ್ಟಿಲ್ಲವಂತೆ. ಪದೇ ಪದೇ ಭಾರತದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಕೇಳಿ ಟಾರ್ಚರ್ ಕೊಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.


ಅಷ್ಟೇ ಅಲ್ಲದೇ ಅಭಿನಂದನ್ ಮಲಗದಂತೆ ಜೋರಾಗಿ ಸೌಂಡ್ ಹಾಕಿ ಕಣ್ಣೇ ಬಿಡದ ಹಾಗೇ ತುಂಬಾ ಪ್ರಕಾಶಮಾನವಾದ ಲೈಟನ್ನು ಆನ್ ಮಾಡಿದ್ದಾರೆ. ಒಬ್ಬರಿಂದ ಒಬ್ಬರು ಬಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದ್ದರು. ಇನ್ನು, ಅಭಿನಂದನ್ ಅವರ ಬೆನ್ನಿಗೆ ಸ್ವಲ್ಪಮಟ್ಟಿನ ಗಾಯವಾಗಿದ್ದು ದೆಹಲಿಯ ಆರ್ ಆಂಡ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ