ಮನೆಗೆಲಸಕ್ಕೆ ಅಪ್ರಾಪ್ತ ಬಾಲಕಿಯನ್ನಿಟ್ಟುಕೊಂಡ ದಂಪತಿಗೆ ತಕ್ಕ ಶಿಕ್ಷೆ ವಿಧಿಸಿದ ಹೈಕೋರ್ಟ್

ಸೋಮವಾರ, 4 ಮಾರ್ಚ್ 2019 (08:59 IST)
ನವದೆಹಲಿ : ಮನೆಗೆಲಸಕ್ಕೆ ಅಪ್ರಾಪ್ತ ಬಾಲಕಿಯನ್ನು ಇಟ್ಟುಕೊಂಡಿ ದಂಪತಿಗಳಿಗೆ ದೆಹಲಿ ಹೈಕೋರ್ಟ್ ತಕ್ಕ ಶಿಕ್ಷೆ ವಿಧಿಸಿದೆ.

ದೆಹಲಿಯಲ್ಲಿ ವಾಸವಾಗಿರುವ ದಂಪತಿಗಳಿಬ್ಬರು ಏಜೆಂಟ್‌ ಗಳ ಮೂಲಕ ಮನೆಗೆಲಸಕ್ಕೆ ಅಪ್ರಾಪ್ತ ಬಾಲಕಿಯನ್ನು ನೇಮಿಸಿಕೊಂಡಿದ್ದರು. ಅವಳ ಕೈಯಲ್ಲಿ ಕೆಲಸ ಮಾಡಿಸಿಕೊಂಡಿದ್ದಲ್ಲದೇ ದೈಹಿಕ ಹಿಂಸೆ ಕೂಡ ನೀಡುತ್ತಿದ್ದರಂತೆ.

 

ಈ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು ಹೈಕೋರ್ಟ್ ದಂಪತಿಗಳಿಗೆ 1.5 ಲಕ್ಷ ರೂ. ದಂಡದ ಜೊತೆಗೆ  100 ಮರಗಳನ್ನು ನೆಡುವ ಶಿಕ್ಷೆ ವಿಧಿಸಿದೆ. ಅಲ್ಲದೇ ಏಜೆಂಟ್‌ಗಳಿಗೂ  ತಲಾ 10,000 ರೂ. ದಂಡ ವಿಧಿಸಿ ಮರ ನೆಡಲು ಆದೇಶಿಸಿದೆ. ಹಾಗೇ ಹಣವನ್ನು ಬಾಲಕಿಗೆ ನೀಡುವಂತೆ ಆದೇಶಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ