ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕ. ಕಾರಣವೇನು ಗೊತ್ತಾ?

ಸೋಮವಾರ, 5 ನವೆಂಬರ್ 2018 (10:12 IST)
ಚಂಡೀಗಢ : ಶಾಲೆಯ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಎಸೆಯದವರನ್ನು ಕಂಡುಹಿಡಿಯಲು ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಪ್ರಕರಣ ಪಂಜಾಬಿನ ಫಾಜಿಲ್ಕಾ ಜಿಲ್ಲೆಯಲ್ಲಿ ನಡೆದಿದೆ.


ಶಾಲೆಯ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಎಸೆಯಲಾಗಿತ್ತು. ಇದನ್ನು ಕಂಡ ಶಿಕ್ಷಕ ಯಾರು ಈ ಕೆಲಸ ಮಾಡಿದವರು ಎಂದು ಪ್ರಶ್ನಿಸಿದ್ದಾರೆ. ಆಗ ಯಾರು ಬಾಯ್ಬಿಡದ ಕಾರಣ ಕೋಪಗೊಂಡ ಶಿಕ್ಷಕ ಈ ಕೆಲಸ ಮಾಡಿದವರನ್ನು ಪತ್ತೆ ಹಚ್ಚಲು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾನೆ.


ಈ ಘಟನೆಯ ಬಗ್ಗೆ ಕೆಲ ವಿದ್ಯಾರ್ಥಿನಿಯರು ಪಾಲಕರಿಗೆ ತಿಳಿಸಿದ ಹಿನ್ನಲೆಯಲ್ಲಿ ಈ ಬಗ್ಗೆ ಪೋಷಕರು ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ