ಕಳಪೆ ಕೈಬರಹದ ವರದಿ ಬರೆದ ವೈದ್ಯರು ; 5 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

ಶನಿವಾರ, 6 ಅಕ್ಟೋಬರ್ 2018 (08:14 IST)
ಲಖನೌ : ಅರ್ಥವಾಗದ ವರದಿ ಬರೆದ ವೈದ್ಯರ ವಿರುದ್ಧ ಮೂವರು ಕೇಸು ದಾಖಲಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ವೈದ್ಯರ ವಿರುದ್ಧ ತೀರ್ಪು ನೀಡಿದೆ.


ಉತ್ತರ ಪ್ರದೇಶದ ಉನ್ನಾವೋ, ಸೀತಾಪುರ ಹಾಗೂ ಗೊಂಡಾ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ರೋಗಿಗಳಿಗೆ ವೈದ್ಯರು ವರದಿ ನೀಡಿದ್ದರು. ಆದರೆ, ವೈದ್ಯರ ಕಳಪೆ ಕೈಬರಹದಿಂದಾಗಿ ವರದಿ ಓದಿ ಅರ್ಥೈಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆ ರೋಗಿಗಳು ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.


ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ವೈದ್ಯರಿಗೆ 5 ಸಾವಿರ ರೂ. ದಂಡ ವಿಧಿಸಿದೆ. ಹಾಗೇ ವೈದ್ಯರು ನೀಡುವ ವರದಿಗಳು ಭವಿಷ್ಯದಲ್ಲಿ ರೋಗಿಗೆ ಹಾಗೂ ಸಂಬಂಧಿಕರಿಗೆ ಅರ್ಥವಾಗುವ ಭಾಷೆಯಲ್ಲಿ ಹಾಗೂ ಸರಿಯಾದ ಕೈಬರಹವಿರುವಂತೆ ನೋಡಿಕೊಳ್ಳಬೇಕು ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಧಾನ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಜೊತೆಗ ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡಿರುವ ವರದಿಗಳನ್ನ ನೀಡುವಂತೆಯೂ ನ್ಯಾಯಾಲಯ ಸಲಹೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ