ಹಳೇ ನೋಟು ಇಟ್ಟುಕೊಂಡಿದ್ದರೆ ಜೋಕೆ!

ಗುರುವಾರ, 2 ಮಾರ್ಚ್ 2017 (08:51 IST)
ನವದೆಹಲಿ: ಹಳೇ 500, 1000 ರೂ ನೋಟು ಇಟ್ಟುಕೊಂಡಿದ್ದವರಿಗೆ ಇನ್ನು ದಂಡದ ಬಿಸಿ. ಹೌದು ನಿಷೇಧಿತ ನೋಟುಗಳನ್ನು 10 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಇಟ್ಟುಕೊಂಡವರಿಗೆ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.


ಅಧ್ಯಯನ ಉದ್ದೇಶಕ್ಕಾಗಿ ಅಥವಾ ಹವ್ಯಾಸಕ್ಕಾಗಿ ಕೂಡಾ 25 ಕ್ಕಿಂತ ಹೆಚ್ಚು ಹಳೇ ನೋಟುಗಳನ್ನು ಹೊಂದಿದವರಿಗೆ ದಂಡದ ಬರೆ ಎಳೆಯಲಾಗುತ್ತದೆ. ಕಳೆದ ತಿಂಗಳು ಸಂಸತ್ ನಲ್ಲಿ ಅಂಗೀಕಾರವಾದ ದಿ ಸ್ಪೆಸಿಫೈಡ್ ಬ್ಯಾಂಕ್ ನೋಟ್ ಆಕ್ಟ್ ಪ್ರಕಾರ ಈ ನಿಯಮ ಜಾರಿಗೆ ಬರಲಿದೆ.

ಹಳೇ ನೋಟುಗಳ ಠೇವಣಿಗೆ ಮಾರ್ಚ್ 31 ರವರೆಗೆ ಕಾಲಾವಕಾಶ ನೀಡಲಾಗಿದೆ. ಅದನ್ನು ಮೀರಿಯೂ ಹಣ ಇಟ್ಟುಕೊಂಡವರಿಗೆ ದಂಡ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ