ರಾಯ್‌ಬರೇಲಿ: ಕೋಲ್ಕತ್ತಾ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮಾಧ್ಯಮದವರ ಪ್ರಶ್ನೆಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು 'ನನ್ನ ಗಮನವನ್ನು ಬೇರೆಡೆಗೆ ಸೆಳೆಯಬೇಡಿ' ಎಂದು ಹೇಳಿರುವುದಕ್ಕೆ ಬಿಜೆಪಿ ಕಿಡಿಕಾರಿದೆ.
ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಗುಂಡೇಟಿಗೆ ಬಲಿಯಾದ ದಲಿತ ಯುವಕನ ಕುಟುಂಬವನ್ನು ಇಂದು ರಾಹುಲ್ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮದವರು ರಾಹುಲ್ ಗಾಂಧಿ ಅವರಲ್ಲಿ ಕೋಲ್ಕತ್ತಾ ವೈದ್ಯೆ ಪ್ರಕರಣ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಾನು ಇಂದು ನನ್ನ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ಗುಂಡೇಟಿಗೆ ಬಲಿಯಾದ ಕುಟುಂಬವನ್ನು ಭೇಟಿ ಮಾಡಲು ಬಂದಿದ್ದೇನೆ. ನೀವು ಈ ವಿಷಯವನ್ನು ಪ್ರಸ್ತಾಪಿಸದೆ ನನ್ನ ಗಮನವನ್ನು ಬೇರೆಡೆಗೆ ಸೆಳೆಯಲು ಬಯಸುತ್ತಿದ್ದೀರಿ. ದಲಿತರ ಧ್ವನಿಗೆ ಮಹತ್ವ ಕೊಡಲು ನೀವು ಬಯಸುವುದಿಲ್ಲ, ನಾನು ದಲಿತರನ್ನು ರಕ್ಷಿಸಲು ಮತ್ತು ಅವರ ಸಮಸ್ಯೆಯನ್ನು ಕೇಳಲು ಇಲ್ಲಿಗೆ ಬಂದಿದ್ದೇನೆ.
ನಾನು ಯಾವುದೇ ಗೊಂದಲವನ್ನು ಅನುಮತಿಸುವುದಿಲ್ಲ. ಕೋಲ್ಕತ್ತಾ ಪ್ರಕರಣದ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಭಾರತೀಯ ಜನತಾ ಪಕ್ಷದ ವಕ್ತಾರ ಶೆಹಜಾದ್ ಪೂನ್ವಾಲಾ ಅವರು ಗಾಂಧಿಯವರ ಹೇಳಿಕೆಯನ್ನು "ಆಘಾತಕಾರಿ" ಎಂದು ಕರೆದರು.
ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ ಹೊರಹಾಕುತ್ತಿದ್ದು, ಈ ವ್ಯಕ್ತಿ ತಾನು ಮಹಿಳೆಯರಿಗಾಗಿ ಹೋರಾಡುತ್ತಿದ್ದೇನೆ ಎಂದು ಹತ್ರಾಸ್‌ಗೆ ಮೊದಲು ಹೋಗುತ್ತಾರೆ. ಆದರೆ ಕೋಲ್ಕತ್ತಾದ ಭಯಾನಕ ಪ್ರಕರಣವನ್ನು ಒಂದು ಪ್ರಮುಖವಲ್ಲದ ವಿಷಯ ಎಂದು ಕರೆಯುತ್ತಾನೆ ಎಂದು ಕಿಡಿಕಾರಿದ್ದಾರೆ.