ಕೇರಳದೊಂದಿಗೆ ಸೆಣಸಬೇಡಿ, ಬಿಜೆಪಿ, ಆರೆಸ್ಸೆಸ್‌ಗೆ ಸಿಎಂ ವಿಜಯನ್ ತಾಕೀತು

ಸೋಮವಾರ, 16 ಅಕ್ಟೋಬರ್ 2017 (15:43 IST)
ವೆಂಗಾರಾ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ನಾಲ್ಕನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಕೇರಳವನ್ನು ಕೆಣಕಬೇಡಿ ಎಂದು ಸಿಎಂ ಪಿಣರಾಯಿ ವಿಜಯನ್ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಒಂದು ತಿಂಗಳ ಬಿಜೆಪಿಯ ಜನ ರಕ್ಷ ಯಾತ್ರೆಯನ್ನು ಜನತೆ ಒಂದೇ ಧ್ವನಿಯಿಂದ ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ವೆಂಗಾರಾ ವಿಧಾನಸಭೆ ಉಪಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
 
ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೇರಳದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದು, ಇದರಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ಹಾನಿ ಮಾಡುವ "ದುರುದ್ದೇಶಪೂರಿತ ಪ್ರಚಾರ" ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
 
ಕೇರಳದಲ್ಲಿ ಪ್ರವಾಸೋದ್ಯಮವನ್ನು ಹಾಳುಗೆಡುವಲು ಕೇರಳ ಬಹಿಷ್ಕರಿಸುವಂತೆ ಕರೆ ನೀಡಲಾಗುತ್ತಿದೆ. ಇತರ ರಾಜ್ಯಗಳ ಜನತೆಗೆ ಕೂಡಾ ಕೇರಳಕ್ಕೆ ಹೋಗದಂತೆ ಸಲಹೆ ನೀಡಲಾಗುತ್ತಿದೆ. ಪ್ರವಾಸೋದ್ಯಮವನ್ನು ನಿಲ್ಲಿಸುವುದೇ ಬಿಜೆಪಿ, ಆರೆಸೆಸ್ಸ್ ಗುರಿಯಾಗಿದೆ ಎಂದು ಕಿಡಿಕಾರಿದ್ಗಾರೆ.
 
ಕೊಳಕು ತಂತ್ರಗಳು ಮತ್ತು ಕೋಮು ಧೃವೀಕರಣದ ಪ್ರಯತ್ನಗಳ ಹೊರತಾಗಿಯೂ ಬಿಜೆಪಿ ನಾಲ್ಕನೇ ಸ್ಥಾನಕ್ಕೆ ಕೆಳಮಟ್ಟದ ಮತ ಹಂಚಿಕೆ ಪಡೆದಿದೆ. ಉಪಚುನಾವಣೆ ಫಲಿತಾಂಶ ಕೇರಳದೊಂದಿಗೆ ಸೆಣಸಬೇಡಿ ಎನ್ನುವುದಕ್ಕೆ ಪ್ರಬಲ ಎಚ್ಚರಿಕೆಯಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ