ಕೇರಳಕ್ಕೆ ಬಂದಿದೆ ಪ್ರಪಂಚದ ಅತಿ ಉದ್ದದ ಕಾರು...!

ಶನಿವಾರ, 7 ಅಕ್ಟೋಬರ್ 2017 (20:51 IST)
ಕೇರಳ: ಪ್ರಪಂಚದ ಅತಿ ಉದ್ದದ ಕಾರು Cadillac Escalade Limousine. ಈಗ ಈ ಕಾರಿನ ಮೇಲೆ ಕೇರಳಿಗರ ಕಣ್ಣು ಬಿದ್ದಿದೆ. ಆರ್ ಟಿಒ ಕಚೇರಿ ಎದುರು ನಿಂತಿರುವ ಈ ಕಾರಿನ ಎದುರು ಜನ ಫುಲ್ ರಶ್ ಆಗಿದ್ದಾರೆ. ಯಾಕಂದ್ರೆ ತಮ್ಮ ಕಾರು ಅಲ್ಲದಿದ್ದರೂ ಸಹ ಜನ ನಾ ಮುಂದು, ತಾ ಮುಂದು ಅಂತ ಸೆಲ್ಫಿ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಬರೋಬ್ಬರಿ 38 ಅಡಿ ಉದ್ದದ ಲಿಮೋಸಿನ್ ಕಾರು, ವಿದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತೆ. ದುಬೈ ಮೂಲದ ಉದ್ಯಮಿ ಹಾಗೂ ಸಿನೆಮ್ಯಾಕ್ಸ್ ಮಲ್ಟಿಪ್ಲೆಕ್ಸ್ ಮಾಲೀಕ ಚೆಂಗನ್ನೂರು ನಿವಾಸಿ ಬಾಬು ಜಾನ್ ಮತ್ತು ಪಂಜಾಬ್ ನಿವಾಸಿ ಗುರುದೇವ್ ಸದ್ಯ ಈ ಕಾರಿನ ಜಂಟಿ ಮಾಲೀಕರು. ಇಷ್ಟು ದಿನ ದುಬೈನಲ್ಲಿದ್ದ ಈ ಕಾರನ್ನು ‍ಥ್ರಿಲ್ಲರ್ ಸಿನಿಮಾ ಚಿತ್ರೀಕರಣ ದೃಷ್ಟಿಯಿಂದ ಕೇರಳಕ್ಕೆ ಹಡಗು ಮೂಲಕ ತರಲಾಗಿದೆ.

6 ತಿಂಗಳಿನಿಂದ ಕೇರಳದ ಕೋರ್ಟ್ ನ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕಾರನ್ನು ಕೊಚ್ಚಿ ಬಂದರಿನಲ್ಲಿಯೇ ಪಾರ್ಕ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಲೀಕರು ಬೆಂಗಳೂರಿನ ಕಸ್ಟಮ್ಸ್, ಅಬಕಾರಿ ಮತ್ತು ಸೇವಾ ತೆರಿಗೆ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ಮಟ್ಟಂಚೇರಿ ಆರ್ ಟಿಒನಲ್ಲಿ ತಾತ್ಕಾಲಿಕವಾಗಿ ನೋದಾಯಿಸಲಾಗಿದ್ದು, ಕೆಎಲ್-7 ಸಿಎಲ್-6666 ನಂಬರ್ ಪಡೆದುಕೊಂಡಿದ್ದಾರೆ.

ಈ ಕಾರು ಪ್ರಪಂಚದ ಅತಿ ಉದ್ದದ ಕಾರು ಇದಾಗಿದ್ದು, 18 ಮಂದಿ ಇದರಲ್ಲಿ ಕುಳಿತುಕೊಳ್ಳುವ ಅವಕಾಶವಿದೆ. ಅಲ್ಲದೆ ಕಂಪ್ಯೂಟರ್‌, ಟಿವಿ, ಮ್ಯೂಸಿಕ್‌ ಸಿಸ್ಟಂ, ಮಿನಿ ಬಾರ್‌, ವಾಶ್‌ ಬೇಸಿನ್‌, ಚಾಲಕನಿಗೆ ಪ್ರತ್ಯೇಕ ಕ್ಯಾಬಿನ್ ಸೇರಿದಂತೆ ಹಲವು ಸೌಲಭ್ಯಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ