ನನಗೆ 17, 18 ಮತ್ತು 21 ವರ್ಷ ವಯಸ್ಸಿನ ಪುತ್ರಿಯರಿದ್ದು, ನನ್ನ ಕಣ್ಣೆದುರೇ 10-13 ಜನರು ಅವರ ಮೇಲೆ ಅತ್ಯಾಚಾರವೆಸಗಿದ್ದಾರೆ. ಪುತ್ರಿಯರ ಮೇಲೆ ಅತ್ಯಾಚಾರ ಎಸಗುತ್ತಿರುವುದನ್ನು ನೋಡುವಂತೆ ತಾಕೀತು ಮಾಡಿದ್ದರು ಎಂದು ತಾಯಿಯೊಬ್ಬಳು ತನ್ನ ಕರುಣಾಜನಕ ಕಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾಳೆ.
ಮಣಿಪುರ ರಾಜ್ಯದ ಕೆಲ ಗ್ರಾಮಗಳಲ್ಲಿ ವಾಸವಾಗಿದ್ದ ಬಾಲಕಿಯರು , ಯುವತಿಯರು ಮತ್ತು ಮಹಿಳೆಯರ ಮೇಲೆ ಕೆಲ ಅಪರಿಚಿತ ಆರೋಪಿಗಳು ರೇಪ್, ಗ್ಯಾಂಗ್‌ರೇಪ್ ಎಸಗಿದ್ದಲ್ಲದೇ ಲೈಂಗಿಕ ಹಿಂಸೆ ನೀಡಿದ್ದಾರೆ.