ತಾಯಿ ಶವದ ಜತೆ ವಾಸವಿದ್ದ ಸಹೋದರಿಯರ ಬಂಧನ
ತಾಯಿಯ ಶವದೊಂದಿಗೆ ಒಂದು ವರ್ಷಗಳಿಂದ ಇಬ್ಬರು ಸಹೋದರಿಯರು ವಾಸಿಸುತ್ತಿದ್ದ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಒಂದು ವರ್ಷದ ಹಿಂದೆ ಸಾವನ್ನಪ್ಪಿದ ತಾಯಿಯ ಶವದೊಂದಿಗೆ ವಾಸಿಸುತ್ತಿರುವುದು ಪತ್ತೆಯಾಗಿದೆ.
ಇನ್ನು ಪೊಲೀಸರ ಪ್ರಕಾರ, ಉಷಾ ದೇವಿ ಎಂದು ಗುರುತಿಸಲಾದ ಮಹಿಳೆಯು ಡಿಸೆಂಬರ್ 8, 2022 ರಂದು ನಿಧನರಾದರು, ಆದರೆ ಅವರ ಹೆಣ್ಣುಮಕ್ಕಳು ಹಣಕಾಸಿನ ಅಡಚಣೆಯಿಂದ ಅಂತಿಮ ವಿಧಿಗಳನ್ನು ಮಾಡಲಿಲ್ಲ ಆದ್ರಿಂಧ ಶವದೊಂದಿಗೆ ವಾಸಿಸುತ್ತಿದ್ದರು ಅಂತ ಹೇಳಿದ್ದಾರೆ.