ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ಗೆಲುವು : ಯಾರಿಗೆ ಎಷ್ಟು ಮತ?

ಶುಕ್ರವಾರ, 22 ಜುಲೈ 2022 (11:40 IST)
ನವದೆಹಲಿ : ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ ಅಧಿಕೃತವಾಗಿದೆ.
 
ಈ ಮೂಲಕ ಭಾರತದ ಬುಡಕಟ್ಟು ಜನಾಂಗದ ಮೊದಲ ರಾಷ್ಟ್ರಪತಿಯಾಗಿದ್ದಾರೆ. ದೇಶದ ದ್ವಿತೀಯ ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲಲು 5,43,000 ಮತಗಳ ಅಗತ್ಯವಿತ್ತು. ಆದರೆ ಮುರ್ಮು ಪರವಾಗಿ 6,76,803 ಮತ ಅಂದರೆ ಶೇ.64ರಷ್ಟು ಮತಗಳು ಚಲಾವಣೆಯಾಗಿದ್ದರೆ ಯಶವಂತ್ ಸಿನ್ಹಾ ಪರವಾಗಿ 3,80,177 ಮತಗಳು ಅಂದರೆ ಶೇ.35.97 ರಷ್ಟು ಮತಗಳು ಚಲಾವಣೆಯಾಗಿದೆ.

ಗೆಲುವು ಖಚಿತ ಪಡೆಸಿಕೊಂಡ ಮುರ್ಮು, ಭಾರತ ಸ್ವತಂತ್ರ್ಯ ನಂತರ ಜನಿಸಿ ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇದೇ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

64 ವರ್ಷದ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಗೆಲ್ಲುವುದು ಮೊದಲೇ ಖಚಿತವಾಗಿದ್ದ ಕಾರಣ ಅವರ ಹುಟ್ಟೂರು ಒಡಿಶಾದ ಉಪರ್ಪೇಡ ಗ್ರಾಮದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಸಂಭ್ರಮ ಮನೆ ಮಾಡಿತ್ತು. ಸಂತಾಲ್ ಸಮುದಾಯದ ಸಾಂಪ್ರದಾಯಿಕ ನೃತ್ಯ ಕೋಯಾ ಶೈಲಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಮುರ್ಮು ಅವರು ವಾಸವಿರುವ ರಾಯ್ರಂಗಪುರದಲ್ಲಿಯೂ ಸಂಭ್ರಮ ಮನೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ