ದೆಹಲಿ: ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿರೋ ಕೊಹ್ಲಿ ಬ್ಯಾಟಿಂಗನ್ನು ನೀವೆಲ್ಲರೂ ನೋಡೇ ಇರ್ತೀರಾ. ಅವರ ಅಗ್ರೆಸ್ಸಿವ್ನೆಸ್ ಆಟ ಎಲ್ಲರನ್ನು ಒಂದ್ ಕ್ಷಣ ಯಪ್ಪ.... ಇದೇನ್ ಮಾರಾಯ! ಅಂದುಬಿಡಬಹುದು. ಆದ್ರೆ ಇದೇ ಅಗ್ರೆಸಿವ್ ಬಾಯ್, ಅವರೊಬ್ಬರನ್ನ ಕಂಡರೆ ತುಂಬಾ ಹೆದರುತ್ತಾರೆ.
ಹೌದು... ಟೆಸ್ಟ್ ಟೀಮ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಾಲ್ಯದಿಂದಲೂ ತಮ್ಮ ಕ್ರಿಕೆಟ್ ಕರಿಯರನ್ನ ಕೋಚ್ ಆಗಿದ್ದ ರಾಜಕುಮಾರ್ ಶರ್ಮಾ ಅವರನ್ನು ಕಂಡ್ರೆ ಈಗ್ಲೂ ಪತರಗುಟ್ತಾರೆ. ಅರ್ಥಾತ್ ಏನೋ ತಪ್ಪು ಮಾಡಿದ್ರಾ ಅಂತಾ ಅಂದುಕೊಳ್ಳಬೇಡಿ. ಬದಲಿಗೆ ಅದು ಗುರುವಿಗೆ ಕೊಹ್ಲಿ ನೀಡುವ ಗೌರವ ಅಂತದ್ದು.
ಇತ್ತೀಚೆಗಷ್ಟೆ ತಮ್ಮದೇ ಕಥಾಹಂದರವುಳ್ಳ 'ದ ಡ್ರೈವನ್' ಅನ್ನೋ ಪುಸ್ತಕದ ರಿಲೀಸ್ ಕಾರ್ಯಕ್ರಮದಲ್ಲಿ ಕೊಹ್ಲಿ ಮನದಾಳ ಬಿಚ್ಚಿಟ್ಟಿದ್ದಾರೆ. ವಿಶೇಷ ಅಂದ್ರೆ ಕೊಹ್ಲಿಗೆ ತಮ್ಮ ಗುರು ರಾಜಕುಮಾರ್ ಸರ್ ಅಂದ್ರೆ ಅದೆಷ್ಟು ಗೌರವ ಅಂದ್ರೆ, ಚಿಕ್ಕಂದಿನಿಂದಲೂ ಕೋಚ್ ಜೊತೆ ಬೆಳೆದ ಅವರಿಗೆ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ತಂಡದಲ್ಲೂ ರಾಜಕುಮಾರ್ ಅವರೇ ಕೋಚ್ ಹುದ್ದೆ ನಿಭಾಯಿಸುತ್ತಿದಾರೆ.
ಅದೇನೆ ಇರಲಿ. ಒಬ್ಬ ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆದುನಿಂತಿದ್ದಾನೆ ಎಂದರೆ ಇಲ್ಲದವರು ಬಂದು ತಮ್ಮತನ ಪ್ರದರ್ಶಿಸುತ್ತಾರೆ. ಆದರೆ ಕೊಹ್ಲಿ ಮಾತ್ರ ತಮ್ಮ ಕ್ರಿಕೆಟ್ ಗುರುವಿಗೆ ಈಗಲೂ ಭಯ-ಭಕ್ತಿಯಿಂದ ನಡೆದುಕೊಳ್ಳುತ್ತಾ, ನಾನಿನ್ನು ಚಿಕ್ಕವನು, ಕಲಿಯುವುದು ತುಂಬಾ ಇದೆ ಎಂದು ತೋರಿಸಿದ್ದಾನೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.