ಭೂಕಂಪದಿಂದ ಮನೆ ಕುಸಿತ! 6 ಮಂದಿ ದುರ್ಮರಣ

ಬುಧವಾರ, 9 ನವೆಂಬರ್ 2022 (07:21 IST)
ಕಠ್ಮಂಡು : ನೇಪಾಳದ ದೋಟಿ ಜಿಲ್ಲೆಯಲ್ಲಿ ಭೂಕಂಪದಿಂದ ಮನೆ ಕುಸಿದು ಆರು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ
 
ನೇಪಾಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಮಧ್ಯರಾತ್ರಿ 1.12ರ ಸುಮಾರಿಗೆ ಭೂಮಿ ಕಂಪನವಾಗಿದೆ. ಈನ್ನು ಮನೆ ಕುಸಿದು ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ.

ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ ಈ ಹಿಂದೆ ಭೂಕಂಪದ ತೀವ್ರತೆಯನ್ನು 5.6 ಎಂದು ಗುರುತಿಸಿತ್ತು. ನೇಪಾಳದಲ್ಲಿ ಕಳೆದ 24 ಗಂಟೆಯಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ