ಅಪ್ಪಳಿಸಿದ 6.6 ತೀವ್ರತೆಯ ಭೂಕಂಪ ! 30 ಕ್ಕೂ ಹೆಚ್ಚು ಮಂದಿ ಸಾವು

ಮಂಗಳವಾರ, 6 ಸೆಪ್ಟಂಬರ್ 2022 (11:16 IST)
ಬೀಜಿಂಗ್ : ನೈಋತ್ಯ ಚೀನಾದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಇದರಿಂದ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
 
ಸಿಚುವಾನ್ ಪ್ರಾಂತ್ಯದ ಕಾಂಗ್ಡಿಂಗ್ ನಗರದ ಆಗ್ನೇಯಕ್ಕೆ ಸುಮಾರು 43 ಕಿ.ಮೀ(26 ಮೈಲುಗಳು) ದೂರದಲ್ಲಿ, 10 ಕಿ.ಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಅಪ್ಪಳಿಸಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ಇಂದು ಚೀನಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಹಲವು ಮನೆಗಳು ಹಾನಿಯಾಗಿವೆ. ಕೆಲವು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಟ್ಟುನಿಟ್ಟಿನ ಕೋವಿಡ್ ಲಾಕ್ಡೌನ್ನಿಂದಾಗಿ ಲಕ್ಷಾಂತರ ಜನರು ತಮ್ಮ ಮನೆಗಳಿಂದ ಹೊರ ಬರಲಾಗದೇ ಕಷ್ಟ ಎದುರಿಸಿದ್ದಾರೆ ಎನ್ನಲಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ