ಅಸ್ಸಾಂನಲ್ಲಿ ಭೂಕಂಪನ: ಪ್ರಾಣ ಉಳಿಸಲು ಮನೆಯಿಂದ ಓಡೋಡಿ ಹೊರಬಂದ ಜನ

Sampriya

ಗುರುವಾರ, 27 ಫೆಬ್ರವರಿ 2025 (14:22 IST)
Photo Courtesy X
ಅಸ್ಸಾಂ: ಇಲ್ಲಿನ ಮೊರಿಗಾಂವ್ ಜಿಲ್ಲೆಯಲ್ಲಿ ಇಂದು ಮುಂಜಾನೆ 5ರಷ್ಟು ಭೂಕಂಪ ಸಂಭವಿಸಿದೆ. ಈ ವೇಳೆ ಭಯಗೊಂಡು ಹಲವು ಮಂದಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಅಸ್ಸಾಂನ ರಾಜಧಾನಿ ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲೂ ಭೂಕಂಪನದ ಅನುಭವವಾಗಿದೆ. ರಿಕ್ಟರ್​ ಮಾಪಕದಲ್ಲಿ 5 ರ ತೀವ್ರತೆ ದಾಖಲಾಗಿದ್ದು, ಈ ಭೂಕಂಪವನ್ನು ಮಧ್ಯಮ ತೀವ್ರತೆಯ ಕಂಪನ ಎಂದು ಪರಿಗಣಿಸಲಾಗುತ್ತದೆ.  ಭೂಮಿ ಕಂಪಿಸಿದ್ದರಿಂದ ಮನೆಯ ಒಳಾಂಗಣ ವಸ್ತುಗಳು ಅಲುಗಾಡಿರುವುದು ಕಂಡು ಬಂದಿದೆ.  ಆದರೆ, ಯಾವುದೇ ಸಾವು ನೋವು ಈತನಕ ವರದಿಯಾಗಿಲ್ಲ.

ಭೂಕಂಪನ ಚಟುವಟಿಕೆಯ ಕೇಂದ್ರಬಿಂದು ಮತ್ತು ಪ್ರಭಾವದ ಬಗ್ಗೆ ವಿವರಗಳು ತಕ್ಷಣವೇ ಸ್ಪಷ್ಟವಾಗಿಲ್ಲ. ಭೂಮಿಯ 16 ಕಿಲೋಮೀಟರ್ ಆಳದಲ್ಲಿ ಭೂಕಂಪವು ಆಗಿದ್ದು, ತಡರಾತ್ರಿ ಸುಮಾರು 2:25 ಗಂಟೆಗೆ ಈ ಕಂಪನ ಸಂಭವಿಸಿದೆ ಎಂದು ಭೂಕಂಪ ಮಾನಿಟರಿಂಗ್ ಏಜೆನ್ಸಿ ಮೂಲಗಳು ತಿಳಿಸಿವೆ.

ಬಂಗಾಳ ಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದ ಎರಡು ದಿನಗಳ ನಂತರ ಈ ಭೂಕಂಪ ಸಂಭವಿದೆ. ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿತ್ತು. ಫೆಬ್ರವರಿ 25ರಂದು ಬೆಳಗ್ಗೆ ಕಂಪನ ಉಂಟಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ