ತಿರುವನಂತಪುರ: ಇಲ್ಲಿನ ಹೊರವಲಯವಾದ ವೆಂಜರಮೂಡು ಎಂಬಲ್ಲಿ ಯುವಕನೊಬ್ಬನ ಅಟ್ಟಹಾಸಕ್ಕೆ ಐದು ಮಂದಿ ಬಲಿಯಾಗಿದ್ದಾರೆ. ಈ ಘಟನೆಯು ಕೇರಳ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
23 ವರ್ಷದ ಆಘಾನ್ ಎಂಬ ಯುವಕ ಫೆಬ್ರುವರಿ 24ರಂದು ತನ್ನ ಕುಟುಂಬದ ಐವರನ್ನು ಸುತ್ತಿಗೆಯಿಂದ ಹಣೆ, ತಲೆಗೆ ಹೊಡೆದು ಅತ್ಯಂತ ಕ್ರೂರವಾಗಿ ಹತ್ಯೆಮಾಡಿದ್ದಾರೆ. ಅಲ್ಲದೆ, ತಾಯಿಯ ಮೇಲೂ ಗಂಭೀರ ಹಲ್ಲೆ ಮಾಡಿದ್ದಾನೆ. ಆತನ ತಾಯಿ ತಿರುವನಂತಪುರದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಫೆಬ್ರುವರಿ 24ರಂದು ಬೆಳಿಗ್ಗೆ 10.30 ರಿಂದ 12.30ರ ಸುಮಾರು ವೆಂಜರಮೂಡುವಿನ ಪಾಂಗೊಡೆ ಮನೆಯಲ್ಲಿ ಹಾಲ್‌ನಲ್ಲಿ ಕುಳಿತಿದ್ದ ಆಘಾನ್ ತನ್ನ ಅಜ್ಜಿ 74 ವರ್ಷದ ಸಲ್ಮಾ ಬೀಬಿ ಅವರನ್ನು ಸಾಯಿಸಿದ್ದಾನೆ. ನಂತರ ಎಸ್.ಎನ್ ಪುರ ಎಂಬಲ್ಲಿಗೆ ತೆರಳಿ ತನ್ನ ಚಿಕ್ಕಪ್ಪ 60 ವರ್ಷದ ಲತೀಫ್ ಮತ್ತು ಚಿಕ್ಕಮ್ಮ 56 ವರ್ಷದ ಶಾಹೀದಾ ಅವರನ್ನು ಕೊಂದಿದ್ದಾನೆ.
ಇಷ್ಟಕ್ಕೆ ಶಾಂತವಾಗದ ಆರೋಪಿ ಶಾಲೆಗೆ ಹೋಗಿದ್ದ ತನ್ನ 14 ವರ್ಷದ ತಮ್ಮ ಆಫ್ಸಾನ್, ತಾಯಿ 50 ವರ್ಷದ ರೇಷ್ಮಾ ಹಾಗೂ ಗೆಳತಿ 22 ವರ್ಷದ ಫರ್ಸಾನಾ ಅವರ ಮೇಲೆ ಹಲ್ಲಿ ಮಾಡಿದ್ದಾನೆ. ಆದರೆ, ಆಫ್ಸಾನ್, ಫರ್ಸಾನಾ ಮೃತಪಟ್ಟರೆ, ತಾಯಿ ಬದುಕಿದ್ದಾರೆ.
ಆಫಾನ್ ಅದೇ ದಿನ ರಾತ್ರಿ 8 ಗಂಟೆ ಸುಮಾರು ವೆಂಜರಮೂಡು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಸದ್ಯ ಪೊಲೀಸ್ ವಶದಲ್ಲಿರುವ ಆಫಾನ್‌ನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆಫಾನ್ ಕೊಲೆಗಳನ್ನು ಮಾಡುವ ಮುನ್ನ ಡ್ರಗ್ಸ್ ತೆಗೆದುಕೊಂಡಿದ್ದು ದೃಢಪಟ್ಟಿದೆ.