ಹವಾಲಾ ಹಣದ ಮೇಲೆ ED, IT ನಿಗಾ

ಬುಧವಾರ, 24 ಮೇ 2023 (10:46 IST)
ನವದೆಹಲಿ : 2,000 ರೂ. ಮುಖಬೆಲೆಯ ನೋಟುಗಳನ್ನು ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಹಿಂಪಡೆದಿದ್ದು, ಮಂಗಳವಾರದಿಂದ ಸಾರ್ವಜನಿಕರಿಗೆ ಬ್ಯಾಂಕುಗಳಿಂದ ನೋಟ್ ವಿನಿಮಯ ಮಾಡಿಕೊಳ್ಳು ಅನುಮತಿಸಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಹವಾಲಾ ಹಣದ ಮೇಲೆ ಕಣ್ಣಿಟ್ಟಿದೆ.
 
ಸದ್ಯ ಆರ್ಬಿಐ 3 ತಿಂಗಳು ನೋಟು ವಿನಿಮಯಕ್ಕೆ ಅವಕಾಶ ಕೊಟ್ಟಿದೆ. ಈ ನಡುವೆ ಹವಾಲಾ ದಂಧೆಕೋರರಿಂದ ನೋಟು ವಿನಿಮಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಇಡಿ ಹಾಗೂ ಐಟಿ ಇಲಾಖೆಗಳು ಹವಾಲಾ ದಂಧೆಕೋರರ ಮೇಲೆ ನಿಗಾ ಇರಿಸಿದ್ದು, ಈ ಕುರಿತು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಹವಾಲಾ ದಂಧೆಕೋರರು ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದು, ಹೀಗಾಗಿ ನೋಟು ಹಿಂಪಡೆಯಲು ಮುಂದಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಕಾಳಸಂತೆಯಲ್ಲಿ ಹವಾಲಾ ದಂಧೆಕೋರರ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಹೀಗಾಗಿ ನಗರ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಪ್ರಮುಖವಾಗಿ ಪೆಟ್ರೋಲ್ ಬಂಕ್ಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ