ಅಣ್ಣನ ಪ್ರೇಯಸಿಯನ್ನು ಮಂಚಕ್ಕೆ ಕರೆದ ತಮ್ಮ

ಶುಕ್ರವಾರ, 29 ಜನವರಿ 2021 (09:47 IST)
ಮೇಘವಾಡಿ : ಸಹೋದರನ ಗೆಳತಿಯನ್ನು ವಿಡಿಯೋ, ಸಂದೇಶಗಳನ್ನು ಇಟ್ಟುಕೊಂಡು  ಲೈಂಗಿಕ ಸಂಬಂಧಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಮೇಘವಾಡಿಯಲ್ಲಿ ನಡೆದಿದೆ.

ಆರೋಪಿಯ ಸಹೋದರ 25 ವರ್ಷದ ಮಹಿಳೆಯ ಜೊತೆ ಸಂಬಂಧದಲ್ಲಿದ್ದರು. ಮದುವೆಯಾಗುವ ವೇಳೆ ಸಹೋದರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  ಆರೋಪಿ ಸಹೋದರನ ಮೊಬೈಲ್ ನಲ್ಲಿದ್ದ ಆತನ ಗೆಳತಿಯ ವಿಡಿಯೋ, ಸಂದೇಶಗಳನ್ನು ಆಕೆಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದ.

ಈ ಬಗ್ಗೆ ಯುವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ