ಸಹೋದರನ ಜೊತೆ ಮಲಗಲು ಪತ್ನಿಗೆ ಒತ್ತಾಯಿಸಿದ ಪತಿ

ಮಂಗಳವಾರ, 19 ಜನವರಿ 2021 (09:26 IST)
ಫಿಲಿಭಿತ್ : ಹೆಂಡತಿಯ ಮೇಲೆ ಮಾನಭಂಗ ಎಸಗಿದ ಪತಿ ತನ್ನ ಸಹೋದರನ ಜೊತೆ ಇರಲು ಒತ್ತಾಯಿಸಿದ ಘಟನೆ ಉತ್ತರ ಪ್ರದೇಶದ ಫಿಲಿಭಿತ್ ಜಿಲ್ಲೆಯ ನ್ಯೂರಿಯಾ ಪ್ರದೇಶದಲ್ಲಿ ನಡೆದಿದೆ.

5 ಮಕ್ಕಳ ತಾಯಿಯಾಗಿದ್ದ 34 ವರ್ಷದ ಸಂತ್ರಸ್ತೆಯ ಮೇಲೆ ಪತಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಆಕೆ ಅನಾರೋಗ್ಯಕ್ಕೊಳಗಾದ ಹಿನ್ನಲೆಯಲ್ಲಿ ಬೇರೆ ಮಹಿಳೆಯೊಂದಿಗೆ ವಿವಾಹವಾದ. ಬಳಿಕ ಆಕೆಯ ಮೇಲೆ ಪತಿಯ ಕಿರಿಯ ಸಹೋದರ ಮಾನಭಂಗ ಎಸಗುತ್ತಿದ್ದ. ಈ ಬಗ್ಗೆ ಪತಿ ಹಾಗೂ ಆತನ ಮನೆಯವರ ಬಳಿ ತಿಳಿಸಿದ್ದರೆ ಅವರು ಆತನ ಜೊತೆ ಸಹಕರಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ಪತಿ ಹಾಗೂ ಆತನ ಮನೆಯವರ ವಿರುದ್ಧ ದೂರು ದಾಖಲಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ