ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಉತ್ತರ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಡಳಿತಾರೂಢ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಮೇಲೆ ಹರಿಹಾಯ್ದಿದ್ದಾರೆ. ಆನೆ (ಬಿಎಸ್‌ಪಿ ಚುನಾವಣಾ ಚಿಹ್ನೆ) ಎಲ್ಲ ಹಣವನ್ನು ತಿಂದುಹಾಕಿದರೆ, ಸೈಕಲ್ (ಸಮಾಜವಾದಿ ಚುನಾವಣಾ ಚಿಹ್ನೆ) ಪಂಕ್ಚರ್ ಆಗಿ ನಿಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಹಾಥಿ ಸಾರಾ ಪೈಸಾ ಖಾಗಯಾ( ಆನೆ ಹಣವನ್ನೆಲ್ಲ ತಿಂದು ಹಾಕಿತು), ಹಾಥಿ ಕೊ ಅಪ್ನೆ ಮಾರ್ ಕೆ ಭಗಾ ದಿಯಾ (ಅದನ್ನು ನೀವು ಹೊಡೆದೋಡಿಸಿದಿರಿ. ಪಿರ್ ಆಪ್ ಸೈಕಲ್ ಲಾಯೇ (ಬಳಿಕ ನೀವು ಸೈಕಲ್ ತಂದಿರಿ),ಯೆ ಪಾಂಚ್ ಸಾಲ್ ಸೆ ಪಂಸಿ ಹುಯಿ ಹೈ, ಹಿಲ್ ನಹಿ ರಹೀ ಹೈ ( ಸೈಕಲ್ ಕಳೆದ ಐದು ವರ್ಷಗಳಿಂದ ಸಿಕ್ಕಿ ಹಾಕಿಕೊಂಡಿದೆ, ಅಲ್ಲಾಡುತ್ತಲೂ ಇಲ್ಲ) ಉಸ್ಕಾ ಟೈರ್ ಪಂಕ್ಚರ್ ಹೈ, ಔರ್ ಆಪ್ಕೋ ರೇಷನ್ ಕಾರ್ಡ್ ನಹೀಂ ದಿಲಾ ಪಾ ರಹೀ ಹೈ( ಅದರ ಚಕ್ರ ಪಂಕ್ಚರ್ ಆಗಿದೆ, ಹೀಗಾಗಿ ನಿಮಗೆ ಪಡಿತರ ಚೀಟಿಯನ್ನು ಕೊಡಿಸಲು ಅದರಿಂದಾಗುತ್ತಿಲ್ಲ) ಎಂದು ಯುಪಿಯಲ್ಲಿ ಕಿಸಾನ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಅಣಕವಾಡಿದ್ದಾರೆ.
'ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳೆರಡು ನಿಮಗೆ ವಂಚನೆ ಮಾಡಿದ್ದು, ನೀವೀಗ 'ಕೈ' ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಆ ಬಳಿಕ ಪಡಿತರ ಚೀಟಿ ಮತ್ತು ರೈತರಿಗಾಗಿ ನಾವೇನು ಮಾಡುತ್ತೇವೆ ಎಂದು ನೋಡಿ ', ಎನ್ನುವುದರ ಮೂಲಕ ಅವರು ಮತದಾರರನ್ನು ಓಲೈಸಲು ಪ್ರಯತ್ನಿಸಿದ್ದಾರೆ.