ಛತ್ತೀಸ್‌ಗಡದಲ್ಲಿ ಎನ್‌ಕೌಂಟರ್‌: 3 ಮಹಿಳೆಯರು ಸೇರಿ 13 ನಕ್ಸಲರ ಹತ್ಯೆ

Sampriya

ಬುಧವಾರ, 3 ಏಪ್ರಿಲ್ 2024 (15:55 IST)
ಬಿಜಾಪುರ(ಛತ್ತೀಸ್‌ಗಡ): ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ  13 ನಕ್ಸಲರ ಹತ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ಆರಂಭಗೊಂಡು ಇಂದು 13 ನಕ್ಸಲರ ಸಾವಿನೊಂದಿಗೆ ಕೊನೆಗೊಂಡಿದೆ. ಅದಲ್ಲದೆ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು  ಭದ್ರತಾ ಪಡೆಗಳು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಕೊರ್ಚೋಲಿ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ನಂತರ ಹತ್ತು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದಂತೆ ಒಟ್ಟು 13 ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಬಿಜಾಪುರದ ಗಂಗ್ಲೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲರು ಇರುವ ಮಾಹಿತಿಯ ಮೇರೆಗೆ ಡಿಆರ್‌ಜಿ, ಸಿಆರ್‌ಪಿಎಫ್, ಎಸ್‌ಟಿಎಫ್ ಮತ್ತು ಕೋಬ್ರಾ ಜವಾನರ ಜಂಟಿ ತಂಡ ಕಾರ್ಯಚರಣೆ ನಡೆಸಿದೆ.

ಮಂಗಳವಾರ ತಡರಾತ್ರಿ 10 ನಕ್ಸಲೀಯರ ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಮೂವರು ದುಷ್ಕರ್ಮಿಗಳ ಶವಗಳು ಬುಧವಾರ ಮುಂಜಾನೆ ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ