ಕೋಟ್ಯಂತರ ರೂ. ಬ್ಯಾಂಕ್ ಸಾಲಗಳನ್ನು ಪಾವತಿ ಮಾಡದೇ ವಂಚಿಸಿ ಸುಸ್ತಿದಾರರಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಬೆಲೆಬಾಳುವ ಆಸ್ತಿಪಾಸ್ತಿಗಳಿಗೆ ಈಗ ಸಂಚಕಾರ ಉಂಟಾಗಿದೆ. ಜಾರಿ ನಿರ್ದೇಶನಾಲಯವು ಶನಿವಾರ ವಿಜಯ್ ಮಲ್ಯ ಅವರಿಗೆ ಸೇರಿದ 6,630 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಈ ಆಸ್ತಿಗಳಲ್ಲಿ ಮಾಲ್, ತೋಟದ ಮನೆ ಮತ್ತು ಅನೇಕ ಶೇರುಗಳು ಸೇರಿವೆ. ಇಡಿ ಮುಟ್ಟುಗೋಲು ಹಾಕಿಕೊಂಡ ಮಲ್ಯ ಆಸ್ತಿಗಳು ಮುಂಬೈ, ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿವೆ.
ಬ್ಯಾಂಕ್‌ಗಳಿಗೆ 9000 ಕೋಟಿ ರೂ. ಸಾಲ ಬಾಕಿಇರಿಸಿಕೊಂಡಿರುವ ಮಲ್ಯ ಮಾರ್ಚ್‌ನಲ್ಲಿ ಭಾರತದಿಂದ ನಿರ್ಗಮಿಸಿ ಲಂಡನ್‌ನಲ್ಲಿದ್ದಾರೆ. ಅದಾದ ಬಳಿಕ ಅವರ ಪಾಸ್‌ಪೋರ್ಟ್ ಕೂಡ ಸರ್ಕಾರ ರದ್ದು ಮಾಡಿದೆ. ಮಲ್ಯ ಅವರ ಮಹಾರಾಷ್ಟ್ರದಲ್ಲಿರುವ ತೋಟದ ಮನೆ 200 ಕೋಟಿ ಮೌಲ್ಯದ್ದು ಮತ್ತು ಬೆಂಗಳೂರಿನ ಅಪಾರ್ಟ್ ಮೆಂಟ್ ಮತ್ತು ಮಾಲ್ 800 ಕೋಟಿ ರೂ. ಬೆಲೆಬಾಳುತ್ತದೆ ಹಾಗೂ ಯುಬಿಎಲ್ ಮತ್ತು ಯುಎಸ್‌ಎಲ್ ಷೇರುಗಳ ಮೌಲ್ಯ 3000 ಕೋಟಿ ರೂ.ಗಳಾಗಿವೆ.