ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಫೋಟೋ ಅಪ್ ಲೋಡ್ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್
2020 ರಲ್ಲಿ ಮಹಿಳೆಯೊಬ್ಬರು ತನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಯಾಗಿದ್ದು, ಆ ಖಾತೆಯಲ್ಲಿ ಅಶ್ಲೀಲ ಫೋಟೋ ಅಪ್ ಲೋಡ್ ಆಗಿರುವುದನ್ನು ಗಮನಿಸಿದ್ದರು. ಈ ಸಂಬಂಧ ಖಾತೆದಾರರನ್ನು ಪ್ರಶ್ನಿಸಿದಾಗ ಆ ಕಡೆಯಿಂದ ಮಹಿಳೆಗೆ ಬೆದರಿಕೆ ಹಾಕಲಾಗಿತ್ತು.
ಈ ಸಂಬಂಧ ಅಂದೇ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ತನ್ನ ವೈ ಫೈ ಹ್ಯಾಕ್ ಆಗಿದೆ. ಬೇರೆ ಯಾರೋ ತನ್ನ ಹೆಸರಿನಲ್ಲಿ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿ ನಾಟಕವಾಡಿದ್ದ. ಆದರೆ ಈ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದಾಗ ಆತನ ಲ್ಯಾಪ್ ಟಾಪ್ ನಲ್ಲಿ ಅಶ್ಲೀಲ ಫೋಟೋಗಳು ಪತ್ತೆಯಾಗಿತ್ತು. ಈ ಸಂಬಂಧ ಈಗ ಆರೋಪಿಯನ್ನು ಬಂಧಿಸಲಾಗಿದೆ.