ಕೊಹಿಮಾ : ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ (ಎನ್ಡಿಪಿಪಿ) ಹೆಕಾನಿ ಜಖಲು ಅವರು ನಾಗಾಲ್ಯಾಂಡ್ನ ವಿಧಾನಸಭೆಗೆ ಮೊದಲ ಶಾಸಕಿಯಾಗಿ ಚುನಾಯಿತರಾಗಿದ್ದಾರೆ.
ಈಗಾಗಲೇ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಬಿಜೆಪಿಯ ಮಿತ್ರ ಪಕ್ಷವಾದ ಎನ್ಡಿಪಿಪಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ವಿಶೇಷವೆಂದರೆ ನಾಗಾಲ್ಯಾಂಡ್ ರಾಜ್ಯದ ಸ್ಥಾನಮಾನವನ್ನು ಪಡೆದ 60 ವರ್ಷಗಳ ನಂತರ ಮೊದಲ ಮಹಿಳಾ ಶಾಸಕಿ ಆಯ್ಕೆ ಆಗಿದ್ದಾರೆ.
ಈ ಹೆಗ್ಗಳಿಕೆಗೆ ಬಿಜೆಪಿಯ ಮಿತ್ರ ಪಕ್ಷವಾದ ಎನ್ಡಿಪಿಪಿಯ ಹೆಕಾನಿ ಜಖಲು ಅವರು ಪಾತ್ರಾಗಿದ್ದಾರೆ. ದಿಮಾಪುರ್ – 3 ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜಖಲು 31,874 (45.16%) ಮತಗಳನ್ನು ಪಡೆದರು.