ಭಾರತೀಯರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು: ಬಾಬಾ ರಾಮದೇವ್

ಶನಿವಾರ, 5 ಆಗಸ್ಟ್ 2017 (13:36 IST)
ಸಿಕ್ಕಿಂನ ಡೊಕ್ಲಾಮ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ರಿಕ್ತ ನಿಲುವಿನ ಹಿನ್ನೆಲೆಯಲ್ಲಿ, ಯೋಗ ಗುರು ಬಾಬಾ ರಾಮದೇವ್, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಭಾರತೀಯರಿಗೆ ಕರೆ ನೀಡಿದ್ದಾರೆ.
 
ಪಾಕಿಸ್ತಾನದ ಭಯೋತ್ಪಾದಕರನ್ನು ಚೀನಾ ಬಹಿರಂಗವಾಗಿ ಬೆಂಬಲಿಸುತ್ತಿದ್ದು, ಪಾಕಿಸ್ತಾನಕ್ಕೆ ನಾವು ಸರಿಯಾದ ಉತ್ತರವನ್ನು ನೀಡಬೇಕಾಗಿದೆ. ಪಾಕಿಸ್ತಾನ ಆಕ್ರಮಿಸಿಕೊಂಡ ಕಾಶ್ಮೀರವನ್ನು (ಪಿಓಕೆ) ಭಾರತದೊಂದಿಗೆ ವಿಲೀನಗೊಳಿಸಬೇಕಾಗಿದೆ ಮತ್ತು ಎರಡನೆಯದಾಗಿ ಪ್ರತಿಯೊಬ್ಬ ಭಾರತೀಯ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಮನವಿ ಮಾಡಿದ್ದಾರೆ.
 
ಚೀನಾ ವಿಷಯದಲ್ಲಿ  ರಾಜಕೀಯ ಪಕ್ಷಗಳು ತಮ್ಮ ಪರಸ್ಪರ ವೈರತ್ವವನ್ನು ಮರೆತು ಒಂದಾಗಬೇಕು ಎಂದು ಕೋರಿದರು. 
 
ಭಾರತ ಮತ್ತು ಚೀನಾ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ, ದೇಶದಾದ್ಯಂತ ವ್ಯಾಪಾರಿಗಳು ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದ್ದಾರೆ ಮತ್ತು ಸಾರ್ವಜನಿಕರನ್ನು ಖರೀದಿಸದಂತೆ ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮೊದಲಿಗೆ,  ಒಡಿಶಾ ಟ್ರೇಡರ್ಸ್ ಅಸೋಸಿಯೇಷನ್ (FAOTA) ಒಕ್ಕೂಟವು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಸಾರ್ವಜನಿಕರಿಗೆ ಮನವಿ ಮಾಡಿದೆ, ಚೀನಾ ತನ್ನ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಭಾರೀ ಲಾಭವನ್ನು ಗಳಿಸುತ್ತಿರುವುದನ್ನು ತಡೆಯಬೇಕಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ