ನವದೆಹಲಿ:ಇವಿಎಂ (ವಿದ್ಯುನ್ಮಾನ ಮತಯಂತ್ರ)ಗಳನ್ನು ತಿರುಚಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಸೇರಿದಂತೆ ವಿಪಕ್ಷಗಳು ಆರೋಪಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಇವಿಎಂ ಯಂತ್ರವನ್ನು ಹ್ಯಾಕ್ ಮಾಡಿ ತೋರಿಸುವಂತೆ ಹಾಕಿರುವ ಸವಾಲಿನಲ್ಲಿ ಕೇವಲ 2 ರಾಜಕೀಯ ಪಕ್ಷಗಳು ಮಾತ್ರ ಭಾಗವಹಿಸಿವೆ.
ವಿದ್ಯುನ್ಮಾನ ಮತಯಂತ್ರ ಹ್ಯಾಕಥಾನ್ ಸವಾಲಿನಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್) ಮತ್ತು ಎನ್ ಸಿಪಿ ಮಾತ್ರ ಭಾಗವಹಿಸಿವೆ. ಎರಡು ಪಕ್ಷಗಳು ಇವಿಎಂ ಪರೀಕ್ಷೆಗೆ ತಲಾ ಮೂವರನ್ನು ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿದೆ. ವಿದ್ಯುನ್ಮಾನ ಮತಯಂತ್ರವನ್ನು ಪರೀಕ್ಷಿಸಲು ಎನ್ ಸಿಪಿ ಮತ್ತು ಸಿಪಿಎಂಗೆ ಪ್ರತ್ಯೇಕ ಹಾಲ್ ನೀಡಲಾಗಿದೆ.
ಪಂಜಾಬ್, ಉತ್ತರಾಖಂಡ್, ಉತ್ತರಪ್ರದೇಶ ಚುನಾವಣೆಯಲ್ಲಿ ಬಳಸಲ್ಪಟ್ಟ ಒಟ್ಟಾರೆ 14 ಇವಿಎಂಗಳನ್ನು ಎರಡು ಪಕ್ಷಗಳಿಗೆ ನೀಡಿದೆ. ಇವಿಎಂ ಅನ್ನು ತಿರುಚಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಲು ಚುನಾವಣಾ ಅಯೋಗ ಈ ಕ್ರಮ ಕೈಗೊಂಡಿದೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ