ಮಾಜಿ ಸಿಎಂ ಜಯಲಲಿತಾಗೆ 69ನೇ ಜನ್ಮದಿನ: ಸಮಾಧಿಗೆ ಭೇಟಿ ನೀಡಿದ ಗಣ್ಯಾತಿಗಣ್ಯರು

ಶುಕ್ರವಾರ, 24 ಫೆಬ್ರವರಿ 2017 (15:02 IST)
ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾಗೆ ಇಂದು 69ನೇ ಜನ್ಮದಿನದ ಸಂಭ್ರಮ. ಜನ್ಮದಿನದ ಹಿನ್ನೆಲೆಯಲ್ಲಿ ಮರೀನಾ ಬೀಚ್‌ನಲ್ಲಿರುವ ಅವರ ಸಮಾಧಿಗೆ ಭೇಟಿ ನೀಡಲು ಗಣ್ಯಾತಿಗಣ್ಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಆಗಮಿಸಿ ನಮನ ಸಲ್ಲಿಸಿದ್ದಾರೆ. 
 
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಎಐಎಡಿಎಂಕೆ ಪಕ್ಷದ ಮುಖಂಡರು ಅಮ್ಮನ ಸಮಾಧಿಗೆ ಆಗಮಿಸಿ ಆಶೀರ್ವಾದ ಪಡೆದಿದ್ದಾರೆ. 
 
ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಅಮ್ಮನ ಜನ್ಮದಿನದಂದು ಹೊಸ ಪಕ್ಷವನ್ನು ಇಂದು ಹುಟ್ಟು ಹಾಕಿದ್ದು, ಸಂಜೆ ನೂತನ ಪಕ್ಷದ ಹೆಸರನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ