Rahul Gandhi: ದೇಶದ್ರೋಹಿ ಜ್ಯೋತಿ ಮಲ್ಹೋತ್ರಾ ಜೊತೆ ರಾಹುಲ್ ಗಾಂಧಿ ಫೋಟೋ: ನಿಜವೇನು

Krishnaveni K

ಗುರುವಾರ, 22 ಮೇ 2025 (14:43 IST)
Photo Credit: X
ನವದೆಹಲಿ: ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಿದದ ಆರೋಪದಲ್ಲಿ ಬಂಧಿತಳಾಗಿರುವ ಯೂ ಟ್ಯೂಬರ್ ಜ್ಯೋತಿ ಮಲ್ಹೋತ್ರಾ ಜೊತೆ ರಾಹುಲ್ ಗಾಂಧಿ ಇರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಫೋಟೋ ಹಿಂದಿರುವ ನಿಜವೇನು ಇಲ್ಲಿದೆ ವಿವರ.

ರಾಹುಲ್ ಗಾಂಧಿ ಜೊತೆ ಸೀರೆಯುಟ್ಟುಕೊಂಡು ನಿಂತಿರುವ ಜ್ಯೋತಿ ಮಲ್ಹೋತ್ರಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಹಲವರು ರಾಹುಲ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಇಂತಹ ದೇಶದ್ರೋಹಿಗಳ ಜೊತೆ ರಾಹುಲ್ ಕಾಣಿಸಿಕೊಂಡಿದ್ದಾರೆ, ಜ್ಯೋತಿ ಜೊತೆ ರಾಹುಲ್ ಗೆ ಸಂಪರ್ಕವಿತ್ತು ಎಂದೆಲ್ಲಾ ಟೀಕೆ ಮಾಡಲಾಗಿತ್ತು.

ಆದರೆ ಅಸಲಿ ಸತ್ಯ ಬೇರೆಯೇ ಇದೆ. ರಾಹುಲ್ ಗಾಂಧಿ ಜೊತೆ ಜ್ಯೋತಿ ಇರುವ ಫೋಟೋ ನಿಜವಲ್ಲ. ಇದು ಯಾರೋ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿರುವ ಫೇಕ್ ಫೋಟೋ ಆಗಿದೆ.

ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ಫೇಕ್ ಫೋಟೋಗಳು ಹರಿದಾಡುತ್ತಿರುತ್ತವೆ. ಹೀಗಾಗಿ ಇದರಲ್ಲಿ ಫೇಕ್ ಯಾವುದು ನಿಜ ಯಾವುದು ಎಂದು ಗುರುತಿಸುವುದೂ ಕಷ್ಟ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ