Murshidabad ನಲ್ಲಿ ಹಿಂದೂಗಳ ಮೇಲೆ ದಾಳಿಯಾಗುತ್ತಿದ್ದರೆ ಮೂಕರಂತೆ ನಿಂತಿದ್ದ ಪೊಲೀಸರು
ಮುರ್ಷಿದಾಬಾದ್ ಘಟನೆ ಬಗ್ಗೆ ಹೈಕೋರ್ಟ್ ರಚಿಸಿದ್ದ ತನಿಖಾ ಸಮಿತಿ ವರದಿ ನೀಡಿದೆ. ಈ ವರದಿಯಲ್ಲಿ ಆಘಾತಕಾರೀ ಅಂಶಗಳು ಬಯಲಾಗಿವೆ. ಕಳೆದ ತಿಂಗಳು ವಕ್ಫ್ ಪ್ರತಿಭಟನೆ ವೇಳೆ ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಮುರ್ಷಿದಾಬಾದ್ ನಲ್ಲಿ ಹಿಂದೂಗಳ ಹತ್ಯೆ, ಹಿಂಸಾಚಾರ ನಡೆದಿತ್ತು.
ಘಟನೆ ಬಗ್ಗೆ ತನಿಖಾ ವರದಿ ತಯಾರಿಸಿರುವ ಹೈಕೋರ್ಟ್ ಸಮಿತಿ ಪೊಲೀಸರು ಇದ್ದರೂ ಜನರ ಸಹಾಯಕ್ಕೆ ಬಂದಿರಲಿಲ್ಲ ಎಂದಿದೆ. ಶಾಸಕರ ಎದುರೇ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಶಾಸಕ ಅಮೂರುಲ್ ಇಸ್ಲಾಂ ಬೇದ್ವಾನಾ ಗ್ರಾಮಕ್ಕೆ ಬಂದು ಯಾವ ಮನೆಗಳಿಗೆ ಬೆಂಕಿ ಹಚ್ಚಿಲ್ಲ ಎಂದು ಪರಿಶೀಲಿಸಿ ಹೋಗಿದ್ದರು. ಬಳಿಕ ಪ್ರತಿಭಟನಾಕಾರರು ಆ ಮನೆಗಳಿಗೆ ಬೆಂಕಿ ಹಚ್ಚಿದರು. ಈ ಮನೆಗಳು ಯಾವುದೂ ಈಗ ವಾಸಕ್ಕೆ ಯೋಗ್ಯವಾಗಿಲ್ಲ. ಪೊಲೀಸರು ಸ್ಥಳದಲ್ಲಿದ್ದರೂ ಜನರಿಗೆ ಸಹಾಯ ಮಾಡಲಿಲ್ಲ. ಬೆಂಕಿ ನಂದಿಸಲು ಸಹಾಯವಾಗದಂತೆ ನೀರಿನ ಸಂಪರ್ಕ ಕಡಿತಗೊಳಿಸಿದ್ದರು ಎಂಬ ಆಘಾತಕಾರೀ ಅಂಶಗಳು ವರದಿಯಲ್ಲಿ ಬಯಲಾಗಿದೆ. ಜೊತೆಗೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡಲು ಸಲಹೆ ನೀಡಲಾಗಿದೆ.