ಜೀವಂತ ವ್ಯಕ್ತಿಯನ್ನು ಫ್ರೀಝರ್ ನಲ್ಲಿಟ್ಟ ಕುಟುಂಬಸ್ಥರು!

ಶನಿವಾರ, 17 ಅಕ್ಟೋಬರ್ 2020 (11:18 IST)
ಚೆನ್ನೈ: 70 ವರ್ಷದ ವ್ಯಕ್ತಿಯೊಬ್ಬ ಸತ್ತೇ ಹೋದನೆಂದು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯುವ ಬದಲು ಶವಾಗಾರದಲ್ಲಿ 20 ಗಂಟೆಗಳ ಫ್ರೀಝರ್ ನಲ್ಲಿರಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

 

ಕುಟುಂಬಸ್ಥರನ್ನು ವಿಚಾರಣೆ ನಡೆಸಿರುವ ಪೊಲೀಸರು ಅವರು ಮಾನಸಿಕ ಅಸ್ವಸ್ಥರಾಗಿರಬಹುದು ಎಂದು ಅಂದಾಜಿಸಿದ್ದಾರೆ. ಈ ವ್ಯಕ್ತಿ ಎರಡು ಗಂಟೆಗಳಲ್ಲಿ ತೀರಿಕೊಳ್ಳಬಹುದು, ಹೀಗಾಗಿ ಫ್ರೀಝರ್ ನಲ್ಲಿಟ್ಟಿದ್ದಾಗಿ ಕುಟುಂಬಸ್ಥರು ಕಾರಣ ತಿಳಿಸಿದ್ದಾರೆ. ಜೀವಂತ ವ್ಯಕ್ತಿಯನ್ನು ಶವವಿಡುವ ಫ್ರೀಝರ್ ನಲ್ಲಿಡಲು ಬಾಕ್ಸ್ ನೀಡಿದ್ದ ಕಂಪನಿಯವರು ಅದನ್ನು ಮರಳಿ ಪಡೆಯಲು ಬಂದಾಗ ಒಳಗೆಡೆಯಿದ್ದ ವ್ಯಕ್ತಿಯ ದೇಹ ಅಲುಗಾಡುತ್ತಿತ್ತು. ಇದರಿಂದ ಅನುಮಾನಗೊಂಡ ಕಂಪನಿಯವರು ಪೊಲೀಸರಿಗೆ ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ