Faridabad shocker: ಗರ್ಲ್ ಫ್ರೆಂಡ್ ನ ಕೊಂದು ಬೆಡ್ ಬಾಕ್ಸ್ ನಲ್ಲಿ ಶವ ಬಚ್ಚಿಟ್ಟಿದ್ದ ಭೂಪ

Krishnaveni K

ಸೋಮವಾರ, 28 ಏಪ್ರಿಲ್ 2025 (09:34 IST)
ಫರೀದಾಬಾದ್:  ಗರ್ಲ್ ಫ್ರೆಂಡ್ ಕೊಂದು ಯಾರಿಗೂ ಅನುಮಾನ ಬಾರದಂತೆ ಬೆಡ್ ಬಾಕ್ಸ್ ನಲ್ಲೇ ಪ್ರಿಯಕರ ಹೂತಿಟ್ಟ ಶಾಕಿಂಗ್ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ.

ಸರನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿತೇಂದ್ರ ಎಂಬ ಸೇಲ್ಸ್ ಮ್ಯಾನ್ ವೃತ್ತಿಯಲ್ಲಿದ್ದ ವ್ಯಕ್ತಿ ಆರೋಪಿ. ಈತ ತನ್ನ ಜೊತೆಗೆ ಕಳೆದ 10 ವರ್ಷಗಳಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಸೋನಿಯಾ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾನೆ.

ಬಳಿಕ ಶವವನ್ನು ಬೆಡ್ ಬಾಕ್ಸ್ ನಲ್ಲೇ ಮುಚ್ಚಿಟ್ಟಿದ್ದಾನೆ. ಇನ್ನು, ಅಕ್ಕಪಕ್ಕದ ಮನೆಯವರಿಗೆ ವಾಸನೆ ಬರಬಾರದೆಂದು ಧೂಪ, ಅಗರಬತ್ತಿ ಹಚ್ಚಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಆತನ ಅಜ್ಜಿ ಸುಂದರಿ ದೇವಿ ಪೊಲೀಸರಿಗೆ ದೂರು ನೀಡಿದ್ದರು.

ಶನಿವಾರ ಸಂಜೆ ಸುಂದರಿ ದೇವಿಯ ಮನೆಗೆ ಹೋಗಿ ಸೋನಿಯಾಳನ್ನು ಜಿತೇಂದ್ರ ಕೊಲೆ ಮಾಡಿದ್ದ. ಬಳಿಕ ತಲೆಮರೆಸಿಕೊಂಡಿದ್ದ. ಹೀಗಾಗಿ ಸುಂದರಿ ದೇವಿ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಮನೆ ಬೀಗ ಮುರಿದು ಒಳಗೆ ಬಂದಾಗ ರೂಂನಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ