ಮಗುವಿಗೆ ಅರಿಶಿಣ-ಕುಂಕುಮ ತಿನಿಸಿದ ತಂದೆ!
ದೇವರನ್ನು ಮೆಚ್ಚಿಸಲು ತಂದೆ ಮನೆಯೆಲ್ಲಾ ಅರಶಿಣ-ಕುಂಕುಮ ಹಾಕಿದ್ದಲ್ಲದೆ ಮಗುವಿಗೂ ತಿನ್ನಲು ಕೊಟ್ಟಿದ್ದಾನೆ. ಆದರೆ ಆಕೆ ತಿನ್ನದೇ ಹೋದಾಗ ಬಲವಂತವಾಗಿ ತಿನಿಸಿದ್ದಾನೆ. ಪರಿಣಾಮ ಮಗು ಅಸ್ವಸ್ಥವಾಗಿದೆ.
ತಕ್ಷಣವೇ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಸ್ಥಿತಿ ಈಗ ಗಂಭೀರವಾಗಿದೆ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.