ಅಕ್ರಮ ಸಂಬಂಧ ಹೊಂದಿದ್ದಕ್ಕೆ ಬೆತ್ತಲೆ ಮರವಣಿಗೆ ಶಿಕ್ಷೆ

ಗುರುವಾರ, 16 ಜೂನ್ 2022 (10:30 IST)
ರಾಯ್ ಪುರ: ಗಂಡ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಹೆಂಡತಿ ಇಬ್ಬರನ್ನೂ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ್ದಾಳೆ.

ತನ್ನ ಗಂಡ ಬೇರೊಬ್ಬ ಮಹಿಳೆ ಜೊತೆ ಇರುವುದನ್ನು ನೋಡಿದ ಮಹಿಳೆ ಸಿಟ್ಟಿಗೆದ್ದಿದ್ದಳು. ಈ ಕಾರಣಕ್ಕೆ ತನ್ನ ಸಂಬಂಧಿಕರ ಸಹಾಯದಿಂದ ಆತನನ್ನು ಹಾಗೂ ಪ್ರೇಯಸಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಿದ್ದಾಳೆ.

ಇದೀಗ ಪೊಲೀಸರು ಮೆರವಣಿಗೆ ಮಾಡಿಸಿದ ಮಹಿಳೆ ಮತ್ತು ಆಕೆಯ ಸಂಬಂಧಿಕರು ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ