ಆರೋಪಿ ಮಾವ ಸಾಜಿದ್ ಮತ್ತು ಆತನ ಹೆಂಡತಿ ನಇಮಾ ವಿರುದ್ಧ ಭಾರತೀಯ ದಂಡ ಸಂಹಿತೆಯ 376 ನೇ ವಿಧಿ( ಅತ್ಯಾಚಾರ), 506( ಕ್ರಿಮಿನಲ್ ಬೆದರಿಕೆ), ಮತ್ತು 120 (ಕ್ರಿಮಿನಲ್ ಸಂಚು) ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೋಲಿಸ್ ಅಧಿಕಾರಿ ಹೇಳಿದ್ದಾರೆ.
ತನಿಖೆಗೆ ಆದೇಶ ನೀಡಿರುವ ಜಿಲ್ಲಾ ಮಾಜಿಸ್ಟ್ರೇಟ್, ಅವಶ್ಯಕ ಕ್ರಮವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರಕರಣವನ್ನು ಮುಖ್ಯ ವೈದ್ಯಕೀಯ ಅಧಿಕಾರಿಯವರಿಗೆ ಹಸ್ತಾಂತರಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.