ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ನಮ್ಮ ತಂದೆ ಸಿದ್ದರಾಮಯ್ಯನವರ ನಂತರ ಸತೀಶ್ ಜಾರಕಿಹೊಳಿ ನಾಯಕತ್ವ ಬೇಕು ಎಂದು ನಾಯಕತ್ವದ ಚರ್ಚೆ ಹುಟ್ಟು ಹಾಕಿದ್ದ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್ ನಲ್ಲಿ ಮತ್ತೆ ನಾಯಕತ್ವ ವಿವಾದ ಭುಗಿಲೇಳುವಂತೆ ಮಾಡಿದೆ. ಡಿಕೆ ಶಿವಕುಮಾರ್ ಬಣದಲ್ಲಿ ಅಸಮಾಧಾನ ತಂದಿದೆ. ಈ ನಡುವೆ ಯತೀಂದ್ರ ಹೇಳಿಕೆ ಬಗ್ಗೆ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಮ್ಮದು ಏನೇ ಇದ್ದರೂ 2028 ಕ್ಕೆ ಸಿಎಂ ಸ್ಥಾನದ ಕ್ಲೈಮ್ ಮಾಡುತ್ತೇವೆ. ಯತೀಂದ್ರ ಹೇಳಿಕೆ ಅವರ ವೈಯಕ್ತಿಕ. ಪಕ್ಷವನ್ನು ಒಗ್ಗೂಡಿಸಿಕೊಂಡು ಹೋಗುವುದಷ್ಟೇ ನಮ್ಮ ಕೆಲಸ. ಅಹಿಂದ ನಾಯಕತ್ವ ಇಲ್ಲದೇ ಪಕ್ಷ ಸಂಘಟನೆ ಅಸಾಧ್ಯ. ಅಂತಿಮವಾಗಿ ಪಕ್ಷಕ್ಕೆ ಯಾರು ನಾಯಕರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ. ಇದರ ನಡುವೆ ಅವರು ಮುಂದಿನ ಬಾರಿಗೆ ಸಿಎಂ ಆಕಾಂಕ್ಷಿಗಳ ರೇಸ್ ನಲ್ಲಿ ತಾವೂ ಇರುವುದಾಗಿ ನೇರವಾಗಿಯೇ ಹೇಳಿಕೆ ನೀಡಿದ್ದಾರೆ.