ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ನಿಧನ

ಸೋಮವಾರ, 5 ಜುಲೈ 2021 (17:21 IST)
ಮಹಾರಾಷ್ಟ್ರ : ಎಲ್ಗಾರ್ ಪರಿಷದ್ ಕಾರ್ಯಕ್ರಮ ಹಾಗೂ ನಂತರದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಫಾದರ್ ಸ್ಟ್ಯಾನ್ ಸ್ವಾಮಿ ಅವರು ಸೋಮವಾರ (ಜುಲೈ 5) ನಿಧನರಾಗಿದ್ದಾರೆ. ಬಾಂಬೆ ಹೈ ಕೋರ್ಟ್ ಅವರ ಜಾಮೀನು ಅರ್ಜಿಯ ವಿಚಾರಣೆಗೆಂದು ಕೈಗೆತೆಗೆದುಕೊಂಡಾಗ ಅವರ ನಿಧನದ ಸುದ್ದಿಯನ್ನು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಫಾದರ್ ಸ್ಟ್ಯಾನ್ ಸ್ವಾಮಿ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಮಹಾರಾಷ್ಟ್ರದ ತಲೋಜಾ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಸ್ಟಾನ್ ಸ್ವಾಮಿ ಅವರನ್ನ ಕೆಲ ವಾರಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯದಲ್ಲಿ ಭಾನುವಾರ  ವ್ಯತ್ಯಯ ಕಂಡು ಬಂದ ಕಾರಣ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಆದರೆ, ನ್ಯಾಯಾಂಗ ಬಂಧನಕ್ಕೂ ಮುನ್ನ ಆರೋಗ್ಯವಾಗಿದ್ದ ಸ್ಟ್ಯಾನ್ ಸ್ವಾಮಿ ಅವರ ಸ್ಥಿತಿ ಈ ಮಟ್ಟಕ್ಕೆ ತಲುಪಿರುವ ವಿಚಾರವನ್ನು ಕೆಲ ಸಂಘಟನೆಗಳು ಬಾಂಬೆ ಹೈಕೋರ್ಟ್ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಗಮನಕ್ಕೆ ತಂದಿದ್ದವು. ಮಾನವ ಹಕ್ಕು ಆಯೋಗ ಈ ಸಂಬಂಧ ನಿನ್ನೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದ್ದು, ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. ಹಾಗೆಯೇ, 84 ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿ ಅವರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ನೀಡುವಂತೆಯೂ ಸೂಚಿಸಿತ್ತು. ಆದರೆ ಇಂದು ಮಧ್ಯಾಹ್ನ ಫಾದರ್ ಸ್ಟ್ಯಾನ್ ಸ್ವಾಮಿ ಅವರು ಕೊನೆಯುಸಿರೆಳೆದಿದ್ದಾರೆ. ಸ್ವಾಮಿ ಅವರ ವಕೀಲರು ಸೋಮವಾರ ಬೆಳಿಗ್ಗೆ ಬಾಂಬೆ ಹೈ ಕೋರ್ಟಿಗೆ ಇವರ ಜಾಮೀನು ವಿಚಾರವಾಗಿ ದೌಡಾಯಿಸಿದ್ದರು. ಭಾನುವಾರ ಇವರ ಆರೋಗ್ಯ ಪರಿಸ್ಥಿತಿ ಸಾಕಷ್ಟು ಹದಗೆಟ್ಟ ನಂತರ ಕೇಸಿನ ತುರ್ತು ವಿಚಾರಣೆಗೆ ತಿಳಿಸಿತ್ತು ಹಾಗೂ ವೆಂಟಿಲೇಟರ್ ಸೌಕರ್ಯ ನೀಡಲಾಗಿತ್ತು. ಸ್ಟಾನ್ ಸ್ವಾಮಿ ಅವರನ್ನು ಮೇ ತಿಂಗಳಲ್ಲೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ಸೇರಿಸಲಾಗಿತ್ತು. ಆದರೆ ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಿದ್ದು ಮಾತ್ರ ಭಾನುವಾರ. ಸ್ವಾಮಿ ಅವರಿಗೆ ಆಮ್ಲಜನಕ ಪ್ರಮಾಣ ಕುಸಿತ ಹಾಗೂ ಉಸಿರಾಟದ ತೊಂದರೆ ಯಾವಾಗ ಕಾಣಿಸಿಕೊಂಡ ಭಾನುವಾರದ ದಿನತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ ಎಂದು ಅವರ ವಕೀಲರಾದ ಮಿಹಿರ್ ದೇಸಾಯಿ ಹೇಳಿದ್ದಾರೆ. ಸ್ವಾಮಿ ಅವರ ಆರೋ್ಗ್ಯ ಸಾಕಷ್ಟು ಹದಗೆಟ್ಟಿದೆ. ಕೊರೋನಾ ನಂತರದಲ್ಲಿ ಅವರ ಆರೋಗ್ಯದಲ್ಲಿ ಈ ರೀತಿಯ ಏರುಪೇರು ಕಂಡು ಬರುತ್ತಿದೆ ಎಂದು ಕಳೆದ ಭಾನುವಾರ ಮಧ್ಯಾಹ್ನ ವಕೀಲ ದೇಸಾಯಿ ಅವರು ಹೇಳಿಕೆ ನೀಡಿದ್ದರು. ಏನಿದು ಪ್ರಕರಣ:  ಭೀಮಾ ಕೋರೆಗಾಂವ್ ಗಲಭೆ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತರಾದ ಗೌತಮ್ ನವಲಾಖ ಮತ್ತು ಸ್ಟಾನ್ ಸ್ವಾಮಿ ಸೇರಿದಂತೆ ಎಂಟು ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಸುಮಾರು 10 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ಈ ಪ್ರಕರಣದ ಇತರ ಆರೋಪಿಗಳ ಜೊತೆ ಈ ಎಂಟು ಮಂದಿ ಶಾಮೀಲಾಗಿ ದೇಶವಿರೋಧಿ ಸಂಚು ರೂಪಿಸಿದ್ದರು ಎಂದು ಆರೋಪಿಸಿತ್ತು. ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹನಿ ಬಾಬು, ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಪ್ರೊಫೆಸರ್ ಆನಂದ್ ತೆಲ್ತುಂಬೆ, ಮಾವೋವಾದಿ ಮುಖಂಡ ಮಿಲಿಂದ್ ತೆಲ್ತುಂಬೆ ಹಾಗೂ ಕಬೀರ್ ಕಲಾ ಮಂಚ್ನ ಸಾಗರ್ ಗೋರ್ಖೆ, ರಮೇಶ್ ಗಾಯ್ಚೋರ್ ಮತ್ತು ಜ್ಯೋತಿ ಜಗತಪ್ ಅವರು ಚಾರ್ಜ್ಶೀಟ್ನಲ್ಲಿರುವ ಇತರ ಆರೋಪಿಗಳಾಗಿದ್ದಾರೆ. 2017, ಡಿಸೆಂಬರ್ 31ರಂದು ಎಲ್ಗರ್ ಪರಿಷದ್ ಆಯೋಜಿಸಿದ್ದ “ಭೀಮಾ ಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ್” ಕಾರ್ಯಕ್ರಮಕ್ಕೆ ಆನಂದ್ ತೆಲ್ತುಂಬೆ ಸಂಚಾಲಕರಾಗಿದ್ದರು. ಭಾರತ ಸರ್ಕಾರದ ಶಕ್ತಿಗಳನ್ನ ಎಲ್ಲಾ ರೀತಿಯಲ್ಲಿ ಸೋಲಿಸುವ ಸಲುವಾಗಿ ಬುದ್ಧಿಜೀವಿಗಳನ್ನ ಒಗ್ಗೂಡಿಸುವ ಜವಾಬ್ದಾರಿಯನ್ನು ಗೌತಮ್ ನವಲಾಖಗೆ ವಹಿಸಲಾಗಿತ್ತು. ಹಾಗೆಯೇ, ಮಾವೋವಾದಿ ಕಮ್ಯೂನಿಸ್ಟ್ ಸಂಘಟನೆಗೆ ನೇಮಕಾತಿಗಳನ್ನ ಮಾಡುವ ಕಾರ್ಯವನ್ನೂ ಇವರು ಮಾಡುತ್ತಿದ್ದರು ಎಂದು ಎನ್ಐಎ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ