ಕೇರಳದ ಸಿಎಂ ಪಿಣರಾಯಿ ವಿಜಯನ್ ಗೆ ಮಾವೋವಾದಿಗಳಿಂದ ಜೀವ ಬೆದರಿಕೆ ಪತ್ರ

ಶನಿವಾರ, 16 ನವೆಂಬರ್ 2019 (07:02 IST)
ತಿರುವನಂತಪುರಂ : ನಕ್ಸಲರ ಮೇಲೆ ದಾಳಿ ಮಾಡಿ ಅವರ ಸಾವಿಗೆ ಕಾರಣರಾದ ಕೇರಳದ ಸಿಎಂ ಪಿಣರಾಯಿ ವಿಜಯನ್ ಮೇಲೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಮಾವೋವಾದಿಗಳು ಜೀವ ಬೆದರಿಕೆ ಪತ್ರ ಕಳುಹಿಸಿದ್ದಾರೆ.



ಕಳೆದ ತಿಂಗಳಿನಲ್ಲಿ ಕೇರಳದ ಪಾಲಕ್ಕಾಡ್ ನ ಅಗಾಲಿ ಕಾಡುಗಳಲ್ಲಿ ಮಾವೋವಾದಿಗಳ ಮೇಲೆ ಕೇರಳದ ವಿಶೇಷ ಭದ್ರತಾ ಪಡೆಗಳು ದಾಳಿ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಮೃತಪಟ್ಟಿದ್ದರು.

 

ಇದರಿಂದ ರೊಚ್ಚಿಗೆದ್ದ ಮಾವೋವಾದಿಗಳು, ತಮ್ಮ ಸ್ನೇಹಿತರ ಸಾವಿಗೆ ಕಾರಣರಾದ ಸಿಎಂ ಪಿಣರಾಯಿ ವಿಜಯನ್ ಅವರನ್ನು ಕೊಂದು ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂದು ಕೇರಳದ ವಡಕಾರ ಪೊಲೀಸ್ ಠಾಣೆಗೆ ಪತ್ರ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ