ಪಾಟ್ನಾ : ಅಪರೂಪದ ವೈದ್ಯಕೀಯ ಸ್ಥಿತಿಯಲ್ಲಿ, ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು ಬೆಳವಣಿಗೆಯಾಗುತ್ತಿರುವುದು ಕಂಡುಬಂದಿದೆ.
ಹೊಟ್ಟೆ ಉಬ್ಬರ ಮತ್ತು ಮೂತ್ರ ವಿಸರ್ಜನೆಯ ವೇಳೆ ಮಗುವಿಗೆ ಸಮಸ್ಯೆ ಆಗುತ್ತಿದ್ದ ಕಾರಣ ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಇದು ತಿಳಿದುಬಂದಿದೆ. ವೈದ್ಯರ ತಂಡವು ಹಲವಾರು ಪರೀಕ್ಷೆಗಳನ್ನು ನಡೆಸಿದ,ಬಳಿಕ ಅವರು ನವಜಾತ ಶಿಶಿವು ಭ್ರೂಣದ ಒಳಗೆ ಭ್ರೂಣ ದ ಸಮಸ್ಯೆಯಿಂದ ಬಳಲುತ್ತಿದೆ ಎಂದು ಕಂಡುಕೊಂಡಿದ್ದಾರೆ.
ನವಜಾತ ಶಿಶುವನ್ನು ಶಸ್ತ್ರಚಿಕಿತ್ಸೆಗಾಗಿ ರಹಮಾನಿಯಾ ವೈದ್ಯಕೀಯ ಕೇಂದ್ರಕ್ಕೆ ಕರೆತರಲಾಯಿತು, ಅದು ಯಶಸ್ವಿಯಾಗಿ ಪೂರ್ಣಗೊಂಡಿತು. "ಶಿಶುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಮತ್ತು ಅದರ ಸ್ಥಿತಿ ಈಗ ಸ್ಥಿರವಾಗಿದೆ" ಎಂದು ರಹ್ಮಾನಿಯಾ ವೈದ್ಯಕೀಯ ಕೇಂದ್ರದ ಡಾ ತಬ್ರೇಜ್ ಅಜೀಜ್ ತಿಳಿಸಿದ್ದಾರೆ.
ಪರೀಕ್ಷೆ ನಡೆಸಿದ ಬಳಿಕ 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು ಬೆಳವಣಿಗೆಯಾಗುತ್ತಿರುವುದು ಕಂಡುಬಂದಿದೆ ಎಂದು ಅವರು ವಿವರಿಸಿದರು. ಈ ಸ್ಥಿತಿಯನ್ನು ಭ್ರೂಣದಲ್ಲಿ ಭ್ರೂಣ ಎಂದು ಕರೆಯಲಾಗುತ್ತದೆ ಅವರು ವಿವರಿಸಿದರು. ವೈದ್ಯರು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ಹೊರ ತೆಗೆದಿದ್ದು, ಇದೀಗ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.