ಅಹ್ಮದ್ ಪಟೇಲ್ ಮೇಲಿನ ಅಮಿತ್ ಶಾ ಸೇಡಿಗೆ ಬಲಿಯಾದರಾ ಡಿಕೆಶಿ..?

ಗುರುವಾರ, 3 ಆಗಸ್ಟ್ 2017 (09:50 IST)
ನಿನ್ನೆಯಿಂದ ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ನಡೆದ ಐಟಿ ದಾಳಿ ದೇಶಾದ್ಯಂತ ಹಲವು ವಿಶ್ನೇಷಣೆಗಳಿಗೆ ಎಡೆಮಾಡಿಕೊಟ್ಟಿದೆ. ಆಡಳಿತಾರೂಡ ಬಿಜೆಪಿ ಮತ್ತು ಅಹ್ಮದ್ ಪಟೇಲ್ ನಡುವಿನ ಸೇಡಿನ ರಾಜಕಾರಣಕ್ಕೆ ಡಿ.ಕೆ. ಶಿವಕುಮಾರ್ ಬಲಿಯಾದರಾ ಎಂಬ ಅನುಮಾನಗಳೂ ಕಾಡುತ್ತಿವೆ.

2010ರಲ್ಲಿ ಸೊಹ್ರಾಬುದ್ದೀನ್ ಎನ್`ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನ ಸಿಬಿಐ ಬಂಧಿಸಿ ಜೈಲಿಗೆ ಹಾಕಿತ್ತು. 2014ರಲ್ಲಿ ಅಮಿತ್ ಶಾ ಖುಲಾಸೆಯಾಗಿದ್ದರು. ಕೋರ್ಟ ಅವರನ್ನ ಆರೋಪಮುಕ್ತಗೊಳಿಸಿತ್ತು.  ಆದರೆ, ತನ್ನ ವಿರುದ್ಧ ಅಂದಿನ ಆಡಳಿತಾರೂಡ ಯುಪಿಎ ಸರ್ಕಾರ ತಂತ್ರ ರೂಪಿಸಿತ್ತು ಎಂಬುದು ಅಮಿತ್ಯಸಭಾ ಚ ಶಾ ಆರೋಪ. ಅದರಲ್ಲೂ ನರೇಂದ್ರಮೋದಿಗೆ ಆಪ್ತರಾಗಿದ್ದ ಅಮಿತ್ ಶಾ ಅವರನ್ನ ಹಣಿಯಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಈ ತಂತ್ರ ರೂಪಿಸಿದ್ದರು ಎಂಬ ಬಲವಾದ ಻ನುಮಾನ ಻ಮಿತ್ ಶಾಗೆ ಕಾಡಿತ್ತು.

ಅಹ್ಮದ್ ಪಟೇಲ್ ಮೇಲಿನ ಸೇಡು ತೀರಿಸಿಕೊಳ್ಳಲೆಂದೇ ರಾಜ್ಯಸಭಾ ಚುನಾವಣೆಯಲ್ಲಿ ಸೋಲುಣಿಸಿ ಬಿಸಿ ಮುಟ್ಟಿಸಲು ಅಮಿತ್ ಶಾ ಗುಜರಾತ್`ನಲ್ಲಿ ತಂತ್ರ ರೂಪಿಸಿದ್ದರು. ಕಾಂಗ್ರೆಸ್ ಶಾಸಕರ ಮೇಲೂ ಒತ್ತಡ ಹೇರಿದ್ದ ಆರೋಪಗಳೂ ಕೇಳಿ ಬರುತ್ತಿವೆ. 15 ಕೋಟಿ ರೂ. ಆಮಿಷವೊಡ್ಡಿದ್ದ ಬಗ್ಗೆ ಶಾಸಕರ ಬಹಿರಂಗಪಡಿಸಿದ್ದಾರೆ.ಆದರೆ, ಅಮಿತ್ ಶಾ ಅವರ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಮಾಡಿತ್ತು. ಗುಜರಾತ್`ನ ಕಾಂಗ್ರೆಸ್ ಶಾಸಕರನ್ನ ಕರ್ನಾಟಕ್ಕೆ ರೆಸಾರ್ಟ್`ನಲ್ಲಿ ಭದ್ರತೆ ನೀಡಲಾಗಿತ್ತು. ಇದರ ನೇತ್ಋತ್ವ ವಹಿಸಿದ್ದವರು ಸಚಿವ ಡಿ.ಕೆ. ಶಿವಕುಮಾರ್. ಇದರಿಂದ ಬಿಜೆಪಿಯ ಗೆಲುವಿನ ತಂತ್ರಕ್ಕೆ ಭಾರೀ ಹಿನ್ನಡೆಯಾಗಿತ್ತು. ಇದರ ಫಲಪ್ರದವೇ ಐಟಿ ರೇಡ್ ಎಂದು ವಿಶ್ಲೇಷಿಸಲಾಗುತ್ತಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ