ಖಾಲಿ ಇರುವ ಹೈಕೋರ್ಟ್ ಹುದ್ದೆಗಳನ್ನು ಭರ್ತಿ ಮಾಡಿ :ಸುಪ್ರೀಂ ಆದೇಶ
ಮಂಗಳವಾರ, 10 ಆಗಸ್ಟ್ 2021 (14:56 IST)
ನವದೆಹಲಿ: ಹೈಕೋರ್ಟ್ಗಳಲ್ಲಿನ ದೊಡ್ಡ ಹುದ್ದೆಗಳು ಖಾಲಿ ಇರುವುದರಿಂದ ಜನರಿಗೆ ಸಮಸ್ಯೆಗಳಾಗುತ್ತಿವೆ. ಜನರಿಗೆ ಸಮಸ್ಯೆಯಾದರೆ, ನಿಮಗೂ ತೊಂದರೆಯಾಗುತ್ತದೆ , ಬೇಗನೆ ಹೈಕೋರ್ಟ್ಗಳ ಕಾರ್ಯವಿಧಾನದ ಸಮಸ್ಯೆಯನ್ನು ಪರಿಹರಿಸಿ ಸುಪ್ರೀಂ ಹೇಳಿದೆ.
ಉನ್ನತ ನ್ಯಾಯಲಯಗಳಲ್ಲಿ(High Court) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಕೇಂದ್ರ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಈಗಾಗಲೆ ಹಲವು ಹೈ ಕೋರ್ಟ್ ಗಳಲ್ಲಿ ಶೇಕಡ 40ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅದನ್ನು ಭರ್ತಿ ಮಾಡದೇ ನೀವು ತ್ವರಿತ ತೀರ್ಪು ಕೇಳುವುದು ಸರಿಯಲ್ಲ ಎಂದು ಸುಪ್ರೀಂ ಹೇಳಿದೆ. ಅಲ್ಲದೇ ಪ್ರಮುಖ ಪ್ರಕರಣಗಳಲ್ಲಿ ಸಹ ನ್ಯಾಯಾಧೀಶರಿಲ್ಲದೆ ಇರುವುದು ನ್ಯಾಯಾಂಗ ವ್ಯವಸ್ಥೆಯ ಕಾರ್ಯವನ್ನು ನಿಲ್ಲಿಸಿದಂತೆ ಎಂದು ಎಚ್ಚರಿಸಿದೆ. ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರ ನ್ಯಾಯಾಪೀಠವು ಹೈಕೋರ್ಟ್ ವಿಚಾರವಾಗಿ ಕೇಂದ್ರ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದಿದೆ. ಅಲ್ಲದೇ ಈ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಹೈ ಕೋರ್ಟ್ ನ್ಯಾಯಧೀಶರನ್ನು ನೇಮಕ ಮಾಡಲು ಗಡುವು ಸಹ ನಿಗಧಿ ಮಾಡಿತ್ತು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ಸುಪ್ರೀಂ ಕೋಪಕ್ಕೆ ಕಾರಣವಾಗಿದೆ. ಇನ್ನು ಕೇಂದ್ರ ಸರ್ಕಾರ ಕೂಡ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಹ ವಿಚಾರಣೆ ಮತ್ತು ತೀರ್ಪು ವಿಳಂಬವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಸುಗಮವಾಗಿ ಕಾರ್ಯನಿರ್ವಹಿಸುವ ನ್ಯಾಯಾಂಗವು ಸಮರ್ಥ ಪ್ರಜಾಪ್ರಭುತ್ವಕ್ಕೆ ಅಗತ್ಯವಾಗಿದೆ. ಆದರೆ, ಭಾರತದಲ್ಲಿ, ನ್ಯಾಯಾಂಗ ಹುದ್ದೆ ಒಂದು ಶಾಶ್ವತ ಸಮಸ್ಯೆಯಾಗಿದೆ. ಕೆಲವು ಉನ್ನತ ನ್ಯಾಯಾಲಯಗಳಲ್ಲಿ ಹೆಚ್ಚು ಹುದ್ದೆಗಳು ಖಾಲಿ ಇರುವುದು ತೀವ್ರ ಕಳವಳಕಾರಿಯಾಗಿದ್ದು, ಈ ಸಮಸ್ಯೆಯನ್ನು ಬೇಗನೆ ಬಗೆಹರಿಸಬೇಕು ಎಂದು ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಅಲ್ಲದೇ, ನೀವು ನ್ಯಾಯಾಂಗ ವ್ಯವಸ್ಥೆಯನ್ನು ಪ್ಯಾರಲೈಸ್ ಮಾಡಿದರೆ ಅಥವಾ ನಿಧಾನಗೊಳಿಸಿದರೆ ನಿಮ್ಮ ವ್ಯವಸ್ಥೆ ಕೆಲಸಗಳು ಸಹ ನಿಧಾನವಾಗುತ್ತದೆ. ಇದನ್ನು ಸರ್ಕಾರವು ಬೇಗನೆ ಅರಿತುಕೊಳ್ಳಬೇಕು. ನ್ಯಾಯಾಧೀಶರನ್ನು ನೇಮಿಸದಿದ್ದರೆ ಪ್ರಕರಣಗಳ ಸರಿಯಾದ ವಿವಾದದ ಸಮಯ ಮತ್ತು ಸರಿಯಾದ ತೀರ್ಪನ್ನು ಪಡೆಯಲು ಸಾಧ್ಯವಿಲ್ಲ ಎಂದಿದೆ. ಜನರು ವಿವಾದದ ತೀರ್ಪನ್ನು ಸಮಯಕ್ಕೆ ಸರಿಯಾಗಿ ಪಡೆಯಬೇಕು, ಆದರೆ ಹೈಕೋರ್ಟ್ಗಳಲ್ಲಿನ ದೊಡ್ಡ ಹುದ್ದೆಗಳು ಖಾಲಿ ಇರುವುದರಿಂದ ಜನರಿಗೆ ಸಮಸ್ಯೆಗಳಾಗುತ್ತಿವೆ. ಜನರಿಗೆ ಸಮಸ್ಯೆಯಾದರೆ, ನಿಮಗೂ ತೊಂದರೆಯಾಗುತ್ತದೆ ಎಂದು ನ್ಯಾಯಾಲಯವು ಕೇಂದ್ರಕ್ಕೆ ಎಚ್ಚರಿಸಿದ್ದು, ಬೇಗನೆ ಹೈಕೋರ್ಟ್ಗಳ ಕಾರ್ಯವಿಧಾನದ ಸಮಸ್ಯೆಯನ್ನು ಪರಿಹರಿಸಲು ಹೇಳಿದೆ.