ಆಮೆ ಮೊಟ್ಟೆ ಹುಡುಕಿಕೊಡಿ! 5,000 ರೂ. ನೋಟು ಜೇಬಿಗಿಳಿಸಿ!

ಮಂಗಳವಾರ, 4 ಜುಲೈ 2017 (08:58 IST)
ಥಾಣೆ: ಸಮುದ್ರದಲ್ಲಿ ಆಮೆಗಳು ಎಲ್ಲಿ ಮೊಟ್ಟೆ ಇಡುತ್ತವೆ? ಹೀಗೊಂದು ಸಂಶೋಧನೆ ಮಾಡಲು ಹೊರಡುತ್ತೀರೆಂದರೆ ನಿಮಗೆ ಮಹಾರಾಷ್ಟ್ರ ಅರಣ್ಯ ಇಲಾಖೆ ಮತ್ತು ವನ್ಯ ಸಂರಕ್ಷಣಾ ಇಲಾಖೆಯಿಂದ 5000 ರೂ. ಬಹುಮಾನ ಗ್ಯಾರಂಟಿ!


ಹೀಗೂ ಉಂಟೇ ಎಂದು ಯೋಚಿಸುತ್ತಿದ್ದೀರಾ? ಆಮೆಯ ಸಂತತಿಯನ್ನು ಹೆಚ್ಚಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಕೈಗೊಂಡ ಯೋಜನೆಯಿದು. ಮೊಟ್ಟೆ ಹುಡುಕಿ ಕೊಟ್ಟವರಿಗೆ 5000 ರೂ. ಬಹುಮಾನ ಮಾತ್ರವಲ್ಲ ‘ಕಸವ್ ಪುರಸ್ಕಾರ್’ ನೀಡಿ ಸನ್ಮಾನಿಸಲಾಗುವುದು ಎಂದು ಇಲಾಖೆ ಹೇಳಿದೆ.

ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರದ ಕಡಲ ತಡಿಯಲ್ಲಿ ಆಮೆ ಮೊಟ್ಟ ಕಂಡುಬರುತ್ತಿಲ್ಲ. ಇದು ಬಹಳ ಅಪರೂಪದ ಸಂತತಿಯಾಗಿದ್ದು ಇದನ್ನು ಸಂರಕ್ಷಿಸಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಇಲಾಖೆ ಹೇಳಿಕೊಂಡಿದೆ. ಹಾಗಿ ಮೊಟ್ಟೆ ಹುಡುಕಿಕೊಟ್ಟವರಿಗೆ ಬಹುಮಾನದ ಆಫರ್ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ