ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

Sampriya

ಭಾನುವಾರ, 20 ಜುಲೈ 2025 (16:33 IST)
Photo Credit X
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೆಳತಿ ಜತೆಗಿನ ಸರಸ ಭಾರೀ ವೈರಲ್ ಆಗುತ್ತಿದ್ದ ಹಾಗೇ ಅಮೆರಿಕದ ಟೆಕ್ ಕಂಪನಿ ಅಸ್ಟ್ರೊನೊಮರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಬೈರನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ಆ್ಯಂಡಿ ಬೇರಾನ್ ಅವರು ರಾಜೀನಾಮೆ ನೀಡಿರುವುದಾಗಿ ಅಸ್ಟ್ರೊನೊಮರ್ ಕಂಪನಿಯು ಲಿಂಕ್‌ಡೈನ್‌ನಲ್ಲಿ ತಿಳಿಸಿದೆ. 

ಬೋಸ್ಟನ್‌ನಲ್ಲಿ ನಡೆದ ಕೋಲ್ಡ್‌ಪ್ಲೇಯ ಸಂಗೀತ ಕಚೇರಿಯಲ್ಲಿ ತನ್ನ ಕಂಪನಿಯ ಎಚ್‌ ಆರ್ ಮಹಿಳೆಯೊಂದಿಗೆ ಸರಸದಲ್ಲಿ ತೊಡಗಿದ್ದಾಗ ಕ್ಯಾಮರಾದಲ್ಲಿ ಸೆರೆಯಾಯಿತು. ಇದು ಕೆಲ ಗಂಟೆಗಳಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯಿತು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ದೊಡ್ಡ ಸುದ್ದಿಯಾಯಿತು. 

ಈ ಮೂಲಕ ಒಹಿಯೊ ರಾಜ್ಯದ ಸಿನ್‌ಸಿನಾಟಿ ಮೂಲದ ಅಸ್ಟ್ರೊನೊಮರ್ ಸಿಇಒ ಆ್ಯಂಡಿ ಬೇರಾನ್ ಹಾಗೂ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಣಿಯಾದ ಕ್ಟಿಸ್ಟಿನ್ ಕ್ಯಾಬೊಟ್ ಸಂಬಂಧದಲ್ಲಿರುವುದು ಬಹಿರಂಗವಾಗಿತ್ತು.

ಸದ್ಯ ಕ್ಟಿಸ್ಟಿನ್ ಕ್ಯಾಬೊಟ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ಕಂಪನಿ ಆದೇಶಿಸಿದೆ.

ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಆ್ಯಂಡಿ ಬೇರಾನ್ ಅವರು ತಮ್ಮ ಪತ್ನಿ ಮೇಗನ್ ಹಾಗೂ ಇಬ್ಬರು ಮಕ್ಕಳು ಮತ್ತು ಕಂಪನಿಯ ಸಿಬ್ಬಂದಿ ಬಳಿ ಕ್ಷಮೆ ಕೇಳಿದ್ದರು. ‘ಘಟನೆ ನಡೆದಾಗ ನಾನು ತೋರಿದ ವರ್ತನೆ ನನಗೆ ನಾಚಿಕೆ ತರಿಸಿದೆ. ಇದು ನನ್ನ ಖಾಸಗಿ ವಿಷಯ. ಆದರೆ, ಬೇರೆಯವರ ಖಾಸಗಿ ಕ್ಷಣಗಳನ್ನು ಹೀಗೆ ಬಹಿರಂಗಗೊಳಿಸುವುದು ಎಷ್ಟು ಸರಿ? ಅದರ ಪರಿಣಾಮ ಹೇಗಿರುತ್ತದೆ. ಈ ರೀತಿ ಮಾಡುವುದು ಸರಿ ಅಲ್ಲ’ ಎಂದು ಕಿಡಿಕಾರಿದ್ದರು.

ಕ್ಟಿಸ್ಟಿನ್ ಕ್ಯಾಬೊಟ್ ಅವರು ತಮ್ಮ ಪತಿ ಕೆನೆತ್ ತೋರ್ನ್‌ಬಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ