ಮೊದಲ ಬಾರಿ ಚೀನಾಗೆ ಎಚ್ಚರಿಕೆ ನೀಡಿದ ಭಾರತ

ಶುಕ್ರವಾರ, 30 ಜೂನ್ 2017 (14:12 IST)
ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತ ಮೊದಲ ಬಾರಿಗೆ ಚೀನಾ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
 
ಪದೇ ಪದೇ ಗಡಿಯಲ್ಲಿ ತಗಾದೆ ತೆಗೆಯುವುದು ಸರಿಯಲ್ಲ. ಉಭಯ ದೇಶಗಳು ಗಡಿರೇಖೆಯನ್ನು ಗೌರವಿಸಬೇಕು ಎಂದು ಸಲಹೆ ನೀಡಿದೆ.
 
ಸಿಕ್ಕಿಂ ಗಡಿಯಲ್ಲಿ ಚೀನಾ ಭಾರತದ ಎರಡು ಬಂಕರ್‌ಗಳನ್ನು ನಾಶಪಡಿಸಿದ್ದಲ್ಲದೇ. ದೇಶದ ಗಡಿಯೊಳಗೆ ಸೈನಿಕರು ನುಗ್ಗುವ ದುಸ್ಸಾಹಸ ಮೆರೆದಿದ್ದರು. ಆದರೆ, ಭಾರತೀಯ ಸೈನಿಕರು ಚೀನಾ ಸೈನಿಕರನ್ನು ಹೊರಗಟ್ಟುವಲ್ಲಿ ಯಶಸ್ವಿಯಾಗಿದ್ದರು.
 
ಚೀನಾ ಸೈನಿಕರ ವರ್ತನೆಗೆ ತಕ್ಕ ಪ್ರತಿರೋಧ ತೋರುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ